ರವಿಚಂದ್ರನ್ ಮೇಲೆ ಅತ್ಯಾಚಾರ ಆರೊಪ ಇತ್ತಂತೆ!

`ಪ್ರೇಮ ಲೋಕ’ ಚಿತ್ರದ ಮೂಲಕ ಹೊಸ ಬಗೆಯ ಚಿತ್ರಗಳಿಗೆ ಮುನ್ನುಡಿ ಬರೆದಿದ್ದ ಸಿನಿಮಾವನ್ನೇ ಜೀವನವಾಗಿಸಿಕೊಂಡಿರುವ ನಿರ್ದೇಶಕ, ನಿರ್ಮಾಪಕ, ನಟ, ಮ್ಯೂಸಿಕ್ ಡೈರೆಕ್ಟರ್ ರವಿಚಂದ್ರನ್ ಮೇಲೆಯೂ ಅತ್ಯಾಚಾರದ ಆರೋಪ ಹೊರಿಸಲಾಗಿತ್ತಂತೆ. ಹೀಗೆ ಸ್ವತಃ ರವಿಚಂದ್ರನ್ ಸೂಪರ್ ಟಾಕ್‍ಟೈಮ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

`ಹಳ್ಳಿಮೇಷ್ಟ್ರು’ ಚಿತ್ರದಲ್ಲಿ ನಟಿಸಿದ್ದ ಬಿಂದಿಯಾ ಎನ್ನುವ ಮುಂಬೈ ಮೂಲದ ನಟಿ ರವಿಚಂದ್ರನ್ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಳು. ಮೈಸೂರಿನ ಹೋಟೆಲ್‍ವೊಂದರಲ್ಲಿ ರಾತ್ರಿ 12 ಗಂಟೆ ವೇಳೆ ರವಿಚಂದ್ರನ್ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಮುಂಬೈ ಮ್ಯಾಗಜಿನ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಳಂತೆ.

ಇದರಿಂದ ಬೇಸರಗೊಂಡಿದ್ದ ರವಿಚಂದ್ರನ್ ಆಕೆ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದರು. ಬೆಂಗಳೂರಿನ ಕೋರ್ಟಿಗೆ ಬಂದ ಬಿಂದಿಯಾ ತಾನು ಆ ರೀತಿಯ ಹೇಳಿಕೆ ನೀಡಿಯೇ ಇಲ್ಲ ಎಂದಿದ್ದಲ್ಲದೇ ಎಲ್ಲರೆದುರು ರವಿಯ ಕ್ಷಮೆ ಕೋರಿದ್ದಳಂತೆ.