ಚಿತ್ರ ನಿರ್ದೇಶಕ ಕಮಲ್ ದೇಶ ತೊರೆಯಬೇಕೆಂಬ ಬಿಜೆಪಿ ಹೇಳಿಕೆ ಖಂಡಿಸಿ ನಟನಿಂದ ಬೀದಿ ನಾಟಕ

ಬೀದಿ ನಾಟಕ ಪ್ರದರ್ಶಿಸಿದ ಚಿತ್ರ ನಟ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ಅಮೆರಿಕಕ್ಕೆ ಹೋಗಲು ಟಿಕೆಟ್ ಅಗತ್ಯವಿದೆ ಎಂದು ಹೇಳಿ ವ್ಯಕ್ತಿಯೊಬ್ಬರು ಜನಸಂದಣಿ ಹಾಗೂ ಬಸ್ ಸಂಚಾರಗಳ ಮಧ್ಯೆ ಓಡಾಡುತ್ತಿರುವುದನ್ನು ಕಂಡು ನೋಡಿದ ಜನ ಮೂಕಪ್ರೇಕ್ಷರಂತಾಗಿ ವಿವರ ಏನೆಂದು ತಿಳಿಯದೆ ಪರಸ್ಪರ ಮುಖ ನೋಡಬೇಕಾದಂತಹ ಘಟನೆ ಕಾಸರಗೋಡು ಬಸ್ ನಿಲ್ದಾಣ ಪರಿಸರದಲ್ಲಿ ನಡೆಯಿತು.
ಆತ ಮಲಯಾಳಂ ಖ್ಯಾತ ಚಿತ್ರ ನಟ ಅಲನ್ಸಿಯ ಎಂದು ತಿಳಿದ ಬಳಿಕವೇ ಕೆಲವರಿಗೆ ವಿಷಯ ಅರಿವಿಗೆ ಬಂದದ್ದು. ಬಳಿಕ ಆತ ಆಂಗ್ಲ ಪ್ರಜೆಯಂತೆ ನಟಿಸಿದಾಗ ಬಹುತೇಕ ಜನರಿಗೆ ವಿಷಯ ಅರ್ಥವಾಯಿತು.
ಮಲಯಾಳಂ ಚಿತ್ರ ನಿರ್ದೇಶಕ ಕಮಲ್ ದೇಶವನ್ನು ತೊರೆಯಬೇಕೆಂಬ ಬಿಜೆಪಿ ನೇತಾರರ ಹೇಳಿಕೆಯನ್ನು ವಿರೋಧಿಸಿ ಚಿತ್ರ ನಟ ಅಲನ್ಸಿಯ ನಾಟಕವನ್ನು ಕಾಸರಗೋಡು ಬಸ್ ನಿಲ್ದಾಣ ಪರಿಸರದಲ್ಲಿ ಪ್ರದರ್ಶಿಸಿದರು. ಇದನ್ನು ತಿಳಿಯದ ಕೆಲವರು ಆಶ್ಚರ್ಯದಿಂದ ಕೆಲ ಕ್ಷಣ ತಬ್ಬಿಬ್ಬಾದರು. ಫಹದ್ ಫಾಸಿಲ್ ನಾಯಕನಾಗಿರುವ `ತೊಂಡಿ ಮುದಲ್ ದೃಕ್ಷಾಕ್ಷಿಯುಂ’ ಎನ್ನುವ ಚಿತ್ರದಲ್ಲಿ ಅಭಿನಯಿಸಲು ಕಾಸರಗೋಡಿಗೆ ಆಗಮಿಸಿದ ಚಿತ್ರ ನಟ ಅಲನ್ಸಿಯ ಬಿಜೆಪಿ ನೇತಾರರ ವಿರುದ್ಧ ನಾಟಕ ಮೂಲಕ ಪ್ರತಿಭಟನೆ ನಡೆಸಿದರು. ಇದನ್ನು ವೀಕ್ಷಿಸಲು ಹಲವಾರು ಮಂದಿ ಸೇರಿದ್ದರು.