ನಟನಾಗುತ್ತಿರುವ ನಿರ್ದೇಶಕ ಪವನ್ ಕುಮಾರ್

`ಲೂಸಿಯಾ’ ಮತ್ತು `ಯೂ-ಟರ್ನ್’ ಮೊದಲಾದ ಯಶಸ್ವೀ ಸಿನಿಮಾಗಳ ನಿರ್ದೇಶಕ ಪವನ್ ಕುಮಾರ್ ನಟನೆಗ ಇಳಿಯುತ್ತಿದ್ದಾರೆ. ಜಾಕೋಬ್ ವರ್ಗೀಸ್ ನಿರ್ದೇಶನದ `ಚಂಬಲ್’ ಚಿತ್ರದಲ್ಲಿ ಪವನ್ ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ನಿನಾಸಂ ಸತೀಶ್ ಮತ್ತು ಸೋನು ಗೌಡ ಕೂಡಾ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನೆಗೆಟಿವ್ ಪಾತ್ರದಲ್ಲಿ ರೋಜರ್ ನಾರಾಯಣ್ ನಟಿಸಿದ್ದಾರೆ.

ಅಂದಹಾಗೆ `ಚಂಬಲ್’ ಸಿನಿಮಾ ಚಂಬಲ್ ಕಣಿವೆಗೆ ಸಂಬಂಧಿಸಿದ ಚಿತ್ರವಲ್ಲ. ಇದೊಂದು ಥ್ರಿಲ್ಲರ್ ಚಿತ್ರ. ಚಂಬಲ್ ಕಣಿವೆಯನ್ನು ಭೇದಿಸುವುದು ಎಷ್ಟು ಕಷ್ಟವೋ, ಅದೇ ರೀತಿಯಲ್ಲಿ ಈ ಕಥೆ ಸಾಗುತ್ತದೆ ಎನ್ನುತ್ತಾರೆ ನಿರ್ದೇಶಕ. ಚಿತ್ರದ ಬಹುಭಾಗದ ಶೂಟಿಂಗ್ ಈಗಾಗಲೇ ಮುಗಿದಿದ್ದು ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸ ನಡೆಯುತ್ತಿದೆ.