ಮಾಹಿತಿ ಆಯುಕ್ತರ ಅಧಿಕಾರ ಮೊಟಕುಗೊಳಿಸಿದ್ದಕ್ಕೆ ಆಕ್ಷೇಪ

ಶ್ರೀಧರ್ ಆಚಾರ್ಯುಲು, ಕೇಂದ್ರೀಯ ಮಾಹಿತಿ ಆಯುಕ್ತ

ಮೋದಿ ಪದವಿ ವಿವಾದ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ ಪದವಿ ಪಡೆದಿದ್ದಾರೆನ್ನಲಾದ ವರ್ಷವಾದ 1978ರ ಎಲ್ಲಾ ದಾಖಲೆಗಳನ್ನು ಒದಗಿಸುವಂತೆ ದೆಹಲಿ ವಿಶ್ವವಿದ್ಯಾಲಯಕ್ಕೆ ಆದೇಶ ನೀಡಿದ್ದ ಮಾಹಿತಿ ಆಯುಕ್ತ ಮಡಭೂಷಣಂ ಶ್ರೀಧರ್ ಆಚಾರ್ಯುಲು ಅವರ ಅಧಿಕಾರ ಮೊಟಕುಗೊಳಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ  ಲೇಖಕಿ ಅರುಣಾ ರಾಯ್  ಅವರನ್ನೊಳಗೊಂಡ ಸಾಮಾಜಿಕ ಕಾರ್ಯಕರ್ತರ ಗುಂಪೊಂದು ಆಯುಕ್ತರಿಂದ ಹಿಂದೆಗೆದುಕೊಂಡಿರುವ ಅಧಿಕಾರವನ್ನು ಮತ್ತೆ ಅವರಿಗೆ ಹಿಂದಿರುಗಿಸಬೇಕೆಂದು ಮುಖ್ಯ ಮಾಹಿತಿ ಆಯುಕ್ತ ವರಾಧಾಕೃಷ್ಣ ಮಾಥುರ್ ಅವರಿಗೆ ಬರೆದ ಪತ್ರವೊಂದರಲ್ಲಿ ಆಗ್ರಹಿಸಿದ್ದಾರೆ.

“ಆಚಾರ್ಯುಲು ದೆಹಲಿ ವಾರ್ಸಿಟಿಗೆ ಆದೇಶ ನೀಡಿದ ಕೆಲವೇ ದಿನಗಳಲ್ಲಿ ಅವರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಆರ್ಟಿಐ ಪ್ರಕರಣಗಳನ್ನು ವಿಚಾರಿಸುವ ಅಧಿಕಾರವನ್ನು ಹಿಂಪಡೆಯಲಾಗಿತ್ತು.  ಈ ನಿರ್ಧಾರದ ಹಿಂದೆ ರಾಜಕೀಯ ಹಸ್ತಕ್ಷೇಪ ಕೆಲಸ ಮಾಡಿದೆಯೆಂಬುದು ಸಾಮಾನ್ಯ ಅಭಿಪ್ರಾಯವಾಗಿದೆ” ಎಂದೂ ಪತ್ರದಲ್ಲಿ ತಿಳಿಸಲಾಗಿದೆ.