ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕ್ರಮ : ಭರತ್ ಮುಂಡೋಡಿ

ಸಾಂದರ್ಭಿಕ ಚಿತ್ರ

ಕರಾವಳಿ ಅಲೆ ವರದಿ

ಕಾರ್ಕಳ : ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳವುದು ಪ್ರತಿಯೊಬ್ಬ ಕಾರ್ಯಕರ್ತರ ಹೊಣೆಗಾರಿಕೆ, ಚುನಾವಣೆ ಸಂದರ್ಭ ಆಕಾಂಕ್ಷಿಗಳು ಇರುವುದು ಸಾಮಾನ್ಯ. ಆದರೆ ಉಮೇದುವಾರಿಕೆಯ ಹೆಸರಿನಲ್ಲಿ ಪಕ್ಷದ ಶಿಸ್ತನ್ನು ಉಲ್ಲಂಘಿವವರ ವಿರುದ್ಧ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ಭರತ್ ಮುಂಡೋಡಿ ಹೇಳಿದರು.

ಅವರು ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಅಭ್ಯರ್ಥಿ ಆಯ್ಕೆ ವೇಳೆ ಪಕ್ಷದ ವರಿಷ್ಠರಿಂದ ಅಭಿಪ್ರಾಯ ಕ್ರೋಢೀಕರಿಸಿ ಕೆಪಿಸಿಸಿಯಿಂದ ಎಐಸಿಸಿಗೆ ರವಾನಿಸಿ, ಹೈಕಮಾಂಡ್ ತೀರ್ಮಾನಿಸಿದ ಅಧಿಕೃತ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಾಗುತ್ತದೆ. ಪಕ್ಷದ ನೀತಿ ನಿಯಮಾವಳಿಗಳಿಗೆ ವಿರುದ್ಧವಾಗಿ ಯಾರಿಗೂ ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರವಿಲ್ಲ. ಅಭ್ಯರ್ಥಿ ಘೋಷಣೆಯಾಗದೇ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರು ಪ್ರಚಾರದಲ್ಲಿ ತೊಡಗಿರುವುದು ಗಮನಕ್ಕೆ ಬಂದಿದ್ದು, ಇದು ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ. ಪಕ್ಷದ ಉನ್ನತ ಮಟ್ಟದ ಪದಾಧಿಕಾರಿಗಳು ಪಕ್ಷದಲ್ಲಿ ಕಟ್ಟುನಿಟ್ಟನಲ್ಲಿ ಶಿಸ್ತು ಕಾಪಾಡಿಕೊಳ್ಳವಂತೆ, ಪಕ್ಷದ ಘನತೆ, ಗೌರವಕ್ಕೆ ಚ್ಯುತಿ ತರುವಂತಹ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇ ಅದಲ್ಲಿ ಅಂತವರ ಮೇಲೆ ಕ್ರಮ ಕೈಗೊಳ್ಳುವಂತೆ ಎಎಸಿಸಿ ಪ್ರದಾನ ಕಾರ್ಯದರ್ಶಿ, ರಾಜ್ಯ ಚುನಾವಣಾ ಉಸ್ತುವಾರಿ ವೇಣುಗೋಪಾಲ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ” ಎಂದರು.

“ಕಾರ್ಕಳ ಶಾಸಕರು ಬಂಟ್ವಾಳದಲ್ಲಿ ಅಲ್ಲಾ ಮತ್ತು ರಾಮನ ನಡುವೆ ಚುನಾವಣೆ ಅನ್ನುತ್ತಿದ್ದಾರೆ. ಕಾರ್ಕಳದಲ್ಲಿ ಅಲ್ಪಸಂಖ್ಯಾತರ ಮತಬೇಕು ಎನ್ನುತ್ತಿದ್ದಾರೆ. ಇದು ದ್ವಂದ್ವ ನೀತಿ. ಇಂತಹ ಹೇಳಿಕೆಗೆ ಶಾಸಕರು ಬದ್ಧರಾಗಿದ್ದಲ್ಲಿ ಕಾರ್ಕಳದ ಯಾವುದೇ ಅಲ್ಪಸಂಖ್ಯಾತರ ಮತ ಬೇಡ ಎಂಬುದನ್ನು ಬಹಿಂಗವಾಗಿ ಹೇಳಿಕೆ ನೀಡಲಿ. ಬಿಜೆಪಿಯಲ್ಲಿನ ಎಲ್ಲಾ ಅಲ್ಪಸಂಖ್ಯಾತ ಘಟಕಗಳನ್ನು ಹೊರ ಹಾಕಿ ತೋರಿಸಲಿ” ಎಂದು ಸವಾಲು ಎಸೆದರು.

 

LEAVE A REPLY