ಮಹಿಳೆಯರ ಸೀಟಿನಲ್ಲಿ ಕೂತಲ್ಲಿ ದಂಡ ವಿಧಿಸುವ ನಿಯಮ ಬರಲಿ

ಬಸ್ಸುಗಳಲ್ಲಿ ಸಿಟಿ ಬಸ್ ವೇಗದೂತ ಬಸ್ ಹಾಗೂ ದೂರ ಪ್ರಯಾಣದ ಬಸ್ಸುಗಳಿದ್ದು, ಸೀಟುಗಳಲ್ಲಿ ಮಹಿಳಾ ಮೀಸಲಾತಿ ಎಂಬ ನಾಮಫಲಕವಿರುತ್ತದೆ. ಹೆಚ್ಚಿನ ಬಸ್ಸುಗಳಲ್ಲಿ ಚಾಲಕನ ಹಿಂದಿನ 3 ಅಥವಾ 4 ಸೀಟುಗಳು ಮಹಿಳೆಯರಿಗಾಗಿ ಇರುವಂತದ್ದು. ಕೆಲವೊಂದು ಬಸ್ಸುಗಳಲ್ಲಿ  ಮಹಿಳೆಯರಿಗಾಗಿ ಎಂಬುದನ್ನೂ ಬರೆದಿರುವುದಿಲ್ಲ ಇದರಿಂದಾಗಿ ಕೆಲವೊಮ್ಮೆ ಗೊಂದಲ ಗಲಾಟೆ ಮಾತುಕತೆಗಳು ನಡೆದದ್ದೂ ಇದೆ ಬಸ್ಸುಗಳಲ್ಲಿ ಸಂಚರಿಸುವ ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದು ಕೇವಲ 9 ಅಥವಾ 12 ಸೀಟು ಸಾಕಾಗುವುದಿಲ್ಲ ಕೆಲವೊಂದು ಸಮಯದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ ಮಹಿಳೆಯರ ಸೀಟುಗಳನ್ನು 1 ಅಥವಾ 2 ಸೀಟುಗಳನ್ನು ಹೆಚ್ಚಿಸುವುದು ಉತ್ತಮ ಎನ್ನುವುದು ನನ್ನ ಅನಿಸಿಕೆ ಇದರ ಬಗ್ಗೆ ಸಾರಿಗೆ ಪ್ರಾಧಿಕಾರದ ಸಭೆ ಆರ್ಟಿಎಗಳಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರುವುದು ಉತ್ತಮ ಕೆಲವೊಂದು ಸಂದರ್ಭಗಳಲ್ಲಿ ಪುರುಷರ ಸೀಟುಗಳಲ್ಲಿ ಮಹಿಳೆಯರು ಕುಳಿತುಕೊಂಡು ಪ್ರಯಾಣಿಸುವುದು ಇದೆ ಕೆಲವು ಬಸ್ಸಿನ ನಿರ್ವಾಹಕರು ಮಹಿಳಾ ಸೀಟುಗಳಲ್ಲಿ ಕುಳಿತುಕೊಂಡ ಗಂಡಸರನ್ನು ಎಬ್ಬಿಸಿದರೂ ಇನ್ನೂ ಕೆಲವು ನಿರ್ವಾಹಕರು ನಮಗೆ ಯಾಕೆ ಈ ಉಸಾಬರಿ ಎಂಬಂತೆ ಎಬ್ಬಿಸುವ ಗೋಜಿಗೆ ಹೋಗುವುದಿಲ್ಲ ನಿಯಮಗಳನ್ನೆಲ್ಲ ಗಾಳಿಗೆ ತೂರಿಸುವ ಬದಲು ಮಹಿಳೆಯರ ಸೀಟಿನಲ್ಲಿ ಕೂತಲ್ಲಿ ದಂಡ ವಿಧಿಸುವ ನಿಯಮ ಜಾರಿಗೆ ಬರಲಿ ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಲಿ

  • ಅರ್ಥರ್ ಮೆಂಡೋನ್ಸಾ  ಪುತ್ತೂರು

LEAVE A REPLY