ಅನಧಿಕೃತ ಪಾರ್ಕ್ ಮಾಡುವ ವಾಹನದ ವೀಲ್ ಲಾಕ್ ಮಾಡಿ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೆಚ್ಚಿನ ಪ್ರದೇಶಗಳಲ್ಲಿ ವಾಹನ ದಟ್ಟಣೆ ಇರುತ್ತದೆ. ಇಲ್ಲಿಯ ಕೆಲವು ವಲಯಗಳಲ್ಲಿ ಪಾರ್ಕಿಂಗ್ ಇಲ್ಲದ ಸ್ಥಳಗಳಲ್ಲೂ ಪಾರ್ಕಿಂಗ್ ಮಾಡಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಹಿಂತಿರುಗುತ್ತಾರೆ. ಹಂಪನಕಟ್ಟಾ ವಲಯದಲ್ಲಂತೂ ವಿಪರೀತ ವಾಹನಗಳ ದಟ್ಟಣೆ. ಹೋಟೆಲ್ ರೂಪ ಹೋಟೆಲ್ ಎದುರುಗಡೆ ಹಾಗೂ ಮಾಂಡೋವಿ ಮೋಟಾರ್ಸ್ ಬದಿಯಲ್ಲಿ ರಸ್ತೆ ಬದಿಯಲ್ಲಿ ನೋ ಪಾರ್ಕಿಂಗ್ ಎಂಬುದಾಗಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಇದನ್ನೆಲ್ಲಾ ಕಡೆಗಣಿಸಿ ದಿನಂಪ್ರತಿ ಎಂಬಂತೆ ವಾಹನಗಳ ಪಾರ್ಕಿಂಗ್ ನಿಂತಿರುತ್ತದೆ. ಇದೇ ರೀತಿ ಸಿಟಿ ಹಾಸ್ಪಿಟಲ್ ಎದುರುಗಡೆ, ಎಂ ಎಸ್ ಪೈ ಸ್ಯಾನಿಟರಿ ಶಾಪ್ ಎದಿರು ದಿನಂಪ್ರತಿ ಎಂಬಂತೆ ಕಾರುಗಳು ರಸ್ತೆಯಲ್ಲೇ ನಿಲ್ಲುತ್ತಿದ್ದು ಇಲ್ಲಿ ವಾಹನಗಳನ್ನು ಹೊರತೆಗೆಯಲು ದುಸ್ಸಾಹಸಪಡಬೇಕಾಗುತ್ತದೆ. ಇದರಿಂದ ಆಗಾಗ ರಸ್ತೆ ತಡೆ ಉಂಟಾಗುತ್ತದೆ. ಇಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಚಾಲಕರಿಗೆ ತಮ್ಮಿಂದ ಇತರರಿಗೆ ತೊಂದರೆ ಉಂಟಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಬೇಡವೇ ? ಇಲ್ಲಿ ಅಕ್ರಮ ಪಾರ್ಕಿಂಗ್ ಮಾಡುವ ವಾಹನಗಳಿಗೆ ವೀಲ್ಹ್ ಲಾಕ್ ಹಾಕಿ ದಂಡ ವಿಧಿಸಿದಲ್ಲಿ ಮುಂದಕ್ಕೆ ಪಾರ್ಕ್ ಮಾಡುವ ವಾಹನಗಳ ಸಂಖ್ಯೆ ಕಡಿಮೆಯಾಗಬಹುದು ಎಂಬುದಾಗಿ ನನ್ನ ಅನಿಸಿಕೆ

  • ಅರ್ಥರ್ ಮೆಂಡೋನ್ಸಾ  ಪುತ್ತೂರು