ಪ್ರಶಸ್ತಿ ಪುರಸ್ಕøತರಿಗೆ ಸಮ್ಮಾನಕ್ಕೆ ಬಯಲು ರಂಗಮಂದಿರ ಬೇಡ

ಪ್ರಶಸ್ತಿ ಪುರಸ್ಕøತರಿಗೆ ಅಭಿನಂದನಾ ಸಮಾರಂಭ ಸ್ವಾಗತಾರ್ಹ. ಆದರೆ ಈ ಸಮಾರಂಭವನ್ನು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದ ಬಳಿ ಇರುವ ಬಯಲು ರಂಗ ಮಂದಿರದಲ್ಲಿ ನಡೆಸುವ ಬದಲು ಕಲಾಭವನದ ಒಳಗೆ ನಡೆಸುವುದು ಸೂಕ್ತ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ.
ಈಗಾಗಲೇ ಸಾರ್ವಜನಿಕವಾಗಿ ಪ್ರಕಟಿಸಿ ರುವಂತೆ ಈ `ಬಯಲು ರಂಗ ಮಂದಿರ’ವೆನ್ನುವ ಕಟ್ಟಡ ಅನಧಿಕೃತವಾಗಿದ್ದು `ಬೆಳ್ತಂಗಡಿ ಸಮಾಜ ಮಂದಿರ ಬಿಲ್ಡಿಂಗ್ ಸೊಸೈಟಿ’ ಇದಕ್ಕೆ ಸರಕಾರದಿಂದ ಶರ್ತಬದ್ಧವಾಗಿ ಮಂಜೂರಾದ 61 ಸೆಂಟ್ಸ್ ಸ್ಥಳದಲ್ಲಿ ಇರುತ್ತದೆ. ಈ ಸ್ಥಳದಲ್ಲಿದ್ದ ಸಮಾಜ ಮಂದಿರವನ್ನು ಕಾನೂನುಬಾಹಿರವಾಗಿ ಕೆಡವಲಾಗಿದ್ದು ಈ ಕುರಿತು ಮಾನ್ಯ ದ ಕ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ದಾಖಲಾಗಿ ತನಿಖೆಯಲ್ಲಿರುತ್ತದೆ. (ಡಿಕೆಡಿಸಿ/ಎಲ್‍ಎನ್‍ಸಿ/(1ಬಿ) 185 (ಬಿ)/2016-17). ಶರ್ತ ಉಲ್ಲಂಘನೆಗಾಗಿ ಈ ಸ್ಥಳ ಸರಕಾರಕ್ಕೆ ಮುಟ್ಟುಗೋಲು ಹಾಕಬೇಕೆಂದೂ ಮನವಿ ಮಾಡಲಾಗಿದೆ.
ಈ ವಿವಾದಾಸ್ಪದ ಸ್ಥಳದಲ್ಲಿ ಶಾಸಕರು, ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಭಾಗವಹಿಸಿದಲ್ಲಿ ಕಾನೂನು ಉಲ್ಲಂಘನೆಗೆ ಸಹಕರಿಸಿದಂತೆ ಆಗುತ್ತಿದೆ.
ಈ ಸ್ಥಳದಲ್ಲಿ ಬಯಲು ರಂಗಮಂದಿರ ಅಗತ್ಯವಿಲ್ಲ ಬದಲಾಗಿ ಈ ಹಿಂದೆ ಇದ್ದ `ಸಮಾಜ ಮಂದಿರ’ದಂತೆಯೇ ಪುರಭವನ ರಚಿಸಬೇಕೆಂದೂ ಸಮಾಜ ಮಂದಿರ ರಚನೆಗೆ ಕಾರಣರಾದ ಸ್ಥಾಪಕರುಗಳನ್ನು ಸ್ಮರಿಸಬೇಕೆಂದೂ, ತಾಲೂಕಿನ ಅತ್ಯಗತ್ಯ ಅವಶ್ಯಕತೆಯಾದ ಪುರಭವನ ರಚಿಸಬೇಕೆಂದೂ ಶಾಸಕರಿಗೆ ಒತ್ತಾಯಿಸಲಾಗಿದೆ.
1964ರಲ್ಲಿ ಮಂಜೂರಾದ 61 ಸೆಂಟ್ಸ್ ಸ್ಥಳವಲ್ಲದೆ, ಮತ್ತೆ 13 ಸೆಂಟ್ಸ್ ಸಮಾಜ ಮಂದಿರ ಬಿಲ್ಡಿಂಗ್ ಸೊಸೈಟಿಗೆ ಮಂಜೂರು ಮಾಡಲಾಗಿದೆ. 74 ಸೆಂಟ್ಸ್ ಸ್ಥಳದಲ್ಲಿ ಪುರಭವನ ರಚನೆಗೆ ತೀವ್ರ ಆಂದೋಲನ ಆರಂಭಿಸಲಾಗುವುದು. ಯಾವುದೇ ಅಕ್ರಮ ವಿಧಾನದಿಂದ ಈ ಸ್ಥಳವನ್ನು ಇತರ ಉದ್ದೇಶಕ್ಕೆ ಕಬಳಿಸುವ ಹುನ್ನಾರವನ್ನು ವಿರೋಧಿಸಲಾಗುವುದು

  • ಕೆ ಸೋಮನಾಥ್ ನಾಯಕ್,
    ಸದಸ್ಯ, ಸಮಾಜ ಮಂದಿರ ಬಿಲ್ಡಿಂಗ್ ಸೊಸೈಟಿ,
    ಬೆಳ್ತಂಗಡಿ