ಆಟೋ ರಿಕ್ಷಾಕ್ಕೆ ಕಿಚ್ಚಿಟ್ಟ ವ್ಯಕ್ತಿಯ ಗುರುತು ಪತ್ತೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಾಬರಿ ಮಸೀದಿಯನ್ನು ಕೆಡವಿದ ದಿನವಾದ ಡಿಸಂಬರ್ 6ರಂದು ಆಟೋ ರಿಕ್ಷಾಕ್ಕೆ ಕಿಚ್ಚಿಟ್ಟು ಅಶಾಂತಿ ಸೃಷ್ಟಿಸಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಿಯತ್ತಡ್ಕ ಎಂಬಲ್ಲಿ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾವನ್ನು ಕಿಚ್ಚಿಟ್ಟು ನಾಶಗೊಳಿಸಲಾಗಿತ್ತು.

ಘಟನೆಗೆ ಸಂಬಂಧಿಸಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಉಳಿಯತ್ತಡ್ಕ ಹರೀಶ್ ಎಂಬಾತ ಈ ಕೃತ್ಯವನ್ನು ಎಸೆಗಿರುವುದಾಗಿ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.