ಕೊಲೆ ಯತ್ನ ಮಾಡಿ ವಿದೇಶಕ್ಕೆ ಪಲಾಯನ

ಸಾಂದರ್ಭಿಕ ಚಿತ್ರ

ಆರೋಪಿ ಅಹ್ಮದ್ ಕೊಚ್ಚಿಯಲ್ಲಿ ಸೆರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇಲ್ಲಿನ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನೌಷಾದ್ ಎಂಬಾತನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಕುದ್ರೋಳಿ ನಿವಾಸಿ ಅಹ್ಮದ್ ಆಸಿಫ್ ಎಂಬಾತನನ್ನು (33) ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಮಂಗಳೂರು ಬಂದರು ಠಾಣಾ ಪೊಲೀಸರು ಆತನನ್ನು ಕರೆತರಲು ತೆರಳಿದ್ದಾರೆ.

ನಗರದಲ್ಲಿ 2007ರಲ್ಲಿ ನೌಷಾದ್ ಎಂಬಾತನ ಕೊಲೆ ಯತ್ನ ನಡೆದಿತ್ತು. ಈ ಘಟನೆ ಬಳಿಕ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿ ವಿದೇಶಕ್ಕೆ ಪಲಾಯನ ಮಾಡಿದ್ದ. ಈತನ ಬಂಧನಕ್ಕೆ ಅಂದು ಲುಕ್ ಔಟ್ ನೊಟೀಸ್ ಹೊರಡಿಸಲಾಗಿತ್ತು. ದೇಶದಲ್ಲಿರುವ ಎಲ್ಲಾ ವಿಮಾನ ನಿಲ್ದಾಣಗಳಿಗೂ ಮಾಹಿತಿ ರವಾನಿಸಲಾಗಿತ್ತು. ಅಹ್ಮದ್ ಆಸೀಫ್ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ ಎನ್ನುವ ಖಚಿತ ಮಾಹಿತಿ ಪಡೆದ ಅಲ್ಲಿನ ಪೊಲೀಸರು ವಶಕ್ಕೆ ಪಡೆದುಕೊಂಡು ಮಂಗಳೂರಿಗೆ ಮಾಹಿತಿ ರವಾನಿಸಿದ್ದಾರೆ.