ದಾಖಲೆಗಳಿಲ್ಲದೇ ಲಕ್ಷಾಂತರ ರೂ ಹಣ ಸಾಗಿಸಿದ ಆರೋಪಿಗಳಿಗೆ ಜಾಮೀನು

ಮಂಗಳೂರು : ಕಾರಿನಲ್ಲಿ ದಾಖಲೆಗಳಿಲ್ಲದೇ ಸುಮಾರು 13 ಲಕ್ಷ ರೂ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ಮಂಗಳೂರಿನ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿ ಬಿಡುಗಡೆ ಮಾಡಿದೆ.

ದಾಖಲೆರಹಿತವಾಗಿ 13 ಲಕ್ಷ ರೂ ನಗದು ಸಾಗಾಟ ಮಾಡುತ್ತಿದ್ದಾಗ ಪುತ್ತೂರಿನ ಉಮ್ಮರ್ ಫಾರೂಕ್ ಮತ್ತು ಬಿ ಸಿ ರೋಡಿನ ಮಾಡ ನಿವಾಸಿ ಮಹಮ್ಮದ್ ಬಶೀರ್ ಸಿಕ್ಕಿ ಬಿದ್ದಿದ್ದರು. ಇವರಿಗೆ ಮಂಗಳೂರಿನ ಜೆ ಎಂ ಎಫ್ ಸಿ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ.

ನ 26ರಂದು ಸಂಜೆ ಆರೋಪಿಗಳು ಕಾರಿನಲ್ಲಿ ದಾಖಲೆರಹಿತವಾಗಿ ಹೊಸ 2 ಸಾವಿರ ರೂ ಮುಖಬೆಲೆಯ 10 ಲಕ್ಷ ರೂಪಾಯಿಗಳನ್ನು ಸಾಗಾಟ ಮಾಡುವಾಗ ಮಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಸಿಕ್ಕಿ ಬಿದ್ದಿದ್ದರು. ಆರೋಪಿಗಳನ್ನು ಕದ್ರಿ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.