ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪಿಗೆ ನ್ಯಾಯಾಂಗ ಬಂಧನ

ಆರೋಪಿ ಸಿದ್ದೀಕ್

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಶಾಲೆ ಕಂಪೌಂಡಿನೊಳಗೆ ನುಗ್ಗಿ ವಿದ್ಯಾರ್ಥಿನಿಯನ್ನು ಬಲವಂತವಾಗಿ ಶೌಚಾಲಯಕ್ಕೆ ಎಳೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ನ್ಯಾಯಾಲಯ ಎರಡು ವಾರಗಳ ಬಂಧನ ವಿಧಿಸಿದೆ.
ಬದಿಯಡ್ಕ-ಮುಳ್ಳೇರಿಯ ರಸ್ತೆಯ ನಿವಾಸಿ ಸಿದ್ಧಿಕ್ (32) ಎಂಬಾತ ಬಂಧನಕ್ಕೊಳಗಾದ ಆರೋಪಿಯಾಗಿದ್ದಾನೆ. ಜ 10ರಂದು ಸಂಜೆ ಬದಿಯಡ್ಕದಲ್ಲಿ ಘಟನೆ ನಡೆದಿತ್ತು. ಅಧ್ಯಾಪಕನಾದ ತಂದೆ ಜೊತೆ ಮನೆಗೆ ಹೋಗಲೆಂದು ಶಾಲೆಗೆ ಬಂದ ಪ್ಲಸ್ ಟು ವಿದ್ಯಾರ್ಥಿನಿಗೆ ಆರೋಪಿ ಕಿರುಕುಳ ನೀಡಲೆತ್ನಿಸಿದ್ದನು. ತಂದೆ ಶಾಲೆಯಲ್ಲಿ ಸ್ಟಾಫ್ ಮೀಟಿಂಗಿನಲ್ಲಿ ಭಾಗವಹಿಸಿದ್ದ ವೇಳೆ ಬಾಲಕಿ ಶಾಲೆ ಹೊರಗೆ ವರಾಂಡದಲ್ಲಿ ಕುಳಿತಿದ್ದಳು. ಅಲ್ಲಿಗೆ ಕಂಪೌಂಡ್ ಹಾರಿ ಬಂದ ಆರೋಪಿ ಬಾಲಕಿಯನ್ನು ಶೌಚಾಲಯಕ್ಕೆ ಎಳೆದೊಯ್ದು ಲೈಂಗಿಕ ಕಿರುಕುಳ ನೀಡಲೆತ್ನಿಸಿದ್ದಾನೆಂದು ದೂರಲಾಗಿದೆ.