ತಂತ್ರಿಯ ಅಪಹರಿಸಿ ದರೋಡೆ ಪ್ರಕರಣದ ಆರೋಪಿ ಮತ್ತೆ ಕಾಪಾ ಕಾಯ್ದೆಯಡಿ ಸೆರೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಶಬರಿಮಲೆ ಕ್ಷೇತ್ರದ ತಂತ್ರಿಯನ್ನು ಅಪಹರಿಸಿ ಬೆದರಿಕೆಯೊಡ್ಡಿ ನಗ-ನಗದು ದರೋಡೆ ಮಾಡಿದ ಪ್ರಕರಣದಲ್ಲಿ ಆರೋಪಿಯಾದ ಪುಳ್ಕೂರು ನಿವಾಸಿ ಪಿ ಎಂ ಆಶಿಫ್ ಯಾನೆ ಪುಳ್ಕೂರು ಆಶಿಫ(36)ನನ್ನು ಮತ್ತೆ ಕಾಪಾ ಕಾಯ್ದೆಯಡಿ ಕಾಸರಗೋಡು ಪೆÇಲೀಸರು ಬಂಧಿಸಿದ್ದಾರೆ.

2006 ಜುಲೈ 23ರಂದು ಅಂದಿನ ಶಬರಿಮಲೆ ತಂತ್ರಿಯನ್ನು ರಾಜ್ಯದ ಮೊದಲ ಮಹಿಳಾ ಗೂಂಡಾ ಶೋಭಾ ಜೋನ್ ನೆರವಿನೊಂದಿಗೆ ಅಪಹರಿಸಿ ಬೆದರಿಕೆಯೊಡ್ಡಿ ಹಣ, ಮೊಬೈಲ್ ಫೋನ್ ಹಾಗೂ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದಲ್ಲಿ ಪುಳ್ಕೂರು ಆಶಿಫ್ ಬಂಧಿತನಾಗಿದ್ದ. ಈ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡ ಈತ 2007 ಅಕ್ಟೋಬರ್ 7ರಂದು ಕಾಸರಗೋಡು ನಗರದ ಹಳೆ ಬಸ್ ನಿಲ್ದಾಣ ಬಳಿ ಅಶ್ಲೀಲ ಸಿನಿಮಾ ಸೀಡಿ ಮಾರಾಟ ಮಾಡುತ್ತಿದ್ದಾಗ ಕಾಪಿ ರೈಟ್ ಆ್ಯಕ್ಟ್ ಪ್ರಕಾರ ಪೆÇಲೀಸರು ಬಂಧಿಸಿದ್ದರು.

2008 ಫೆಬ್ರವರಿ 11ರಂದು ಉಳಿಯತ್ತಡ್ಕದ ನ್ಯಾಶನಲ್ ನಗರದ ಇಬ್ರಾಹಿಂ ಖಲೀಲರನ್ನು ಅಪಹರಿಸಿ ಮಾರಕಾಯುಧಗಳಿಂದ ಹಲ್ಲೆ, 2008 ನವೆಂಬರ್ 8ರಂದು ಪರಕ್ಕಿಲದ ದಲಿತ ಯುವತಿಗೆ ಉಳಿಯತ್ತಡ್ಕದ ಅಂಗಡಿಯೊಂದರಲ್ಲಿ ಹಲ್ಲೆ ಮಾಡಿದ ಪ್ರಕರಣದ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಬಂಧಿತನಾದ ಈತ 2008 ಡಿಸೆಂಬರ್ 12ರಂದು ಕಾಸರಗೋಡು ಸಬ್ ಜೈಲಿನಲ್ಲಿ ಕೈದಿ ಶ್ರೀಧರ ಶೆಟ್ಟಿಗೆ ಹಲ್ಲೆ ಮಾಡಿದ್ದನು. 2009 ಎಪ್ರಿಲ್ 2ರಂದು ರಾತ್ರಿ 9 ಗಂಟೆಗೆ ಮಂಜತ್ತಡ್ಕದಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪುಳ್ಕೂರು ವಳಯ ಓಲಾರ್ಮೂಲೆಯ ಕಲಂದರ್ ಪಾಶಾಗೆ ಮಾರಕಾಯುಧದಿಂದ ಹಲ್ಲೆ ಮಾಡಿದ ಪ್ರಕರಣದ ಆರೋಪಿಯಾಗಿದ್ದಾನೆ. 2009ರಲ್ಲಿ ಈತನನ್ನು ಕಾಪಾ ಕಾಯ್ದೆಯಡಿ ಬಂಧಿಸಿದ್ದು, ಆರು ತಿಂಗಳ ಜೈಲು ಶಿಕ್ಷೆ ಅನುಭÀವಿಸಿದ್ದನು. ಇದೀಗ ಮತ್ತೆ ಕಾಪಾ ಕಾಯ್ದೆಯಡಿ ಬಂಧಿಸಲಾಗಿದೆ.