ಮನೆಯಿಂದ ನಗ-ನಗದು ಕಳವುಗೈದ ಆರೋಪಿ ಸೆರೆ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಮನೆಯಿಂದ ನಗ-ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೆÇಲೀಸರು ಬಂಧಿಸಿದ್ದಾರೆ
ದೇಲಂಪಾಡಿ ಮಂಚಿಕ್ಕಾನ ನಿವಾಸಿ ಎಂ ಇಸ್ಮಾಯಿಲ್ (26) ಬಂಧಿತ ಆರೋಪಿ  ನವಂಬರ್ 14ರಂದು ಮಂಚಿಕ್ಕಾನದ ರಾಶಿದ್ ಎಂಬವರ ಮನೆಯಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂದೂಕಾಲು ಪವನ್ ಚಿನ್ನದೊಡವೆ ಹಾಗೂ 2500 ರೂ ನಗದನ್ನು ಕಳವು ಗೈಯಲಾಗಿತ್ತು. ಕಳವು ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು 16ರ ಹರೆಯದ ಬಾಲಕನೊಬ್ಬನನ್ನು ಪೆÇಲೀಸರು ಬಂಧಿಸಿದ್ದರು  ಇದೀಗ ಆರೋಪಿ ಇಸ್ಮಾಯಿಲನನ್ನು ಬಂಧಿಸಲಾಗಿದೆ  ಕಳವುಗೈದ ಚಿನ್ನವನ್ನು ಸುಳ್ಯದ ಚಿನ್ನದಂಗಡಿಯೊಂದಕ್ಕೆ ಮಾರಾಟ ಮಾಡಲಾಗಿತ್ತು.