ಗಲ್ಫ್ ಉದ್ಯೋಗಿಗೆ ಇರಿತ ಪ್ರಕರಣ ಆರೋಪಿ ಸೆರೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕೊಲ್ಲಿ ಉದ್ಯೋಗಿಯನ್ನು ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕುಂಬಳೆ ಪೂಲೀಸರು ಬಂಧಿಸಿದ್ದಾರೆ.
ಆರಿಕ್ಕಾಡಿ ಪಿ ಕೆ ನಗರ ಉಸ್ಮಾನ್ (41) ಬಂಧಿತ ಅರೋಪಿ. ಬಂಬ್ರಾಣ ನಿವಾಸಿ ಖಾಲಿದ್ ಎಂಬಾತನನ್ನು ಕಾರು ತಡೆದು ನಿಲ್ಲಿಸಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ. ಕಳೆದ ರವಿವಾರ ಸಂಜೆ ಪಿ ಕೆ ನಗರದಲ್ಲಿ ಈ ಘಟನೆ ನಡೆದಿತ್ತು. ಇರಿತಕ್ಕೊಳಗಾದ ಖಾಲಿದ್ ಈಗಲೂ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಸುಮಾರು ಎಂಟು ಪ್ರಕರಣಗಳಲ್ಲಿ ಆರೋಪಿಯಾಗಿರುವ ಉಸ್ಮಾನ್ ವಿರುದ್ಧ ಕಾಪಾ ಕಾಯ್ದೆ ಹೇರುವಂತೆ ಸೂಚಿಸಿರುವುದಾಗಿ ಕುಂಬಳೆ ಇನಸ್ಪೆಕ್ಟರ್ ತಿಳಿಸಿದ್ದಾರೆ.