ಇಂಧೂರಿನಲಿ ಮನೆ ಕಳವು ಆರೋಪಿ ಪೊಲೀಸ್ ವಶ

ನಮ್ಮ ಪ್ರತಿನಿಧಿ ವರದಿ

ಮುಂಡಗೋಡ : ತಾಲೂಕಿನ ಇಂದೂರ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿ ಸೋಮವಾರ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ಸಹದೇವ ಮುದ್ದಿನಕೊಪ್ಪ ಕಳ್ಳತನ ಮಾಡಿದ ಆರೋಪಿಯಾಗಿದ್ದು, ಈತ ತಾಲೂಕಿನ ಇಂದೂರ ಗ್ರಾಮದವನಾಗಿದ್ದಾನೆ. ಸೆಪ್ಟೆಂಬರ್ 9ರಂದು ಇಂದೂರ ಗ್ರಾಮದ ಶಿವಯ್ಯ ಸುರಗೀಮಠ ಎಂಬುವರ ಮನೆಯ ಹೆಂಚು ತೆಗೆದು ಮನೆಲ್ಲಿಟ್ಟಿದ್ದ 41 ಗ್ರಾಂ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕದ್ದುಕೊಂಡು ಹೋಗಿದ್ದರ ಬಗ್ಗೆ ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹದೇವ ಮುದ್ದಿನಕೊಪ್ಪನ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಆತನ ಚಲನವಲನ ಬಗ್ಗೆ ಸಂಶಯಗೊಂಡು ಆತನನ್ನು ವಿಚಾರಣೆಗೊಳಪಡಿಸಿದಾಗ ಸಹದೇವ ತಾನು ಕಳ್ಳತನಮಾಡಿರುವುದಾಗಿ ಹಾಗೂ ಆಭರಣಗಳನ್ನು ಶಿರಸಿ ಅರ್ಬನ್ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿರುವುದಾಗಿ ತಿಳಿಸಿದ. ಈ ಮಾಹಿತಿಯಂತೆ ಪೊಲೀಸರು ಶಿರಸಿ ಅರ್ಬನ್ ಬ್ಯಾಂಕಿಗೆ ಹೋಗಿ ಸಹದೇವ ಅಡವಿಟ್ಟ ಬಂಗಾರದ ಆಭರಣಗಳಾದ ಬಂಗಾರದ ಬ್ರಾಸಲೈಟ್, ಒಂದು ದೊಡ್ಡ ಉಂಗುರ, ಬಂಗಾರದ ಗಣಪತಿ ಲಾಕೇಟ್, ಬಂಗಾರದ ಸ್ವಸ್ತಿ ಚಿತ್ರವಿರುವ ಲಾಕೇಟ್ ಒಟ್ಟೂ ಸುಮಾರು 60,000 ಮೌಲ್ಯದ ಬಂಗಾರದ ಆಭರಣಗಳನ್ನು ಪೊಲೀಸರು ಜಪ್ತಿಮಾಡಿ ತಮ್ಮ ವಶಕ್ಕೆ ತೆಗೆದುಕೊಂಡು ಆರೋಪಿತನನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ್ದು ನ್ಯಾಯಲಯವು ಆರೋಪಿಯನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದೆ.