ಕೊಲೆ ಆರೋಪಿ ವಿದೇಶಕ್ಕೆ ಪಲಾಯನ ಯತ್ನ, ನಾಕಾಬಂಧಿ

ಪ್ರಮುಖ ಆರೋಪಿ ನಝೀರ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪುಟ್ಬಾಲ್ ವಿವಾದಕ್ಕೆ ಸಂಬಂಧಿಸಿದಂತೆ ಇತ್ತಂಡಗಳೊಳಗೆ ಮಾರಾಮಾರಿಯಾಗಿ ಚೂರಿ ಇರಿತಕ್ಕೊಳಗಾಗಿ ನಡೆದಿದ್ದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಸರಗೋಡು ಪೊಲೀಸರು ಪರಾರಿಯಾಗಿರುವ ಆರೋಪಿಗಳಿಗೆ ತೀವ್ರ ನಾಕಾಬಂದಿ ನಡೆಸಿದ್ದಾರೆ. ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಾವಿಕ್ಕರೆಯ ನಝೀರ್ ತಲೆಮರೆಸಿಕೊಂಡಿದ್ದಾನೆ.

ಕೊಲೆ ಕೃತ್ಯದ ಬಳಿಕ ನಝೀರ್ ವಿದೇಶಕ್ಕೆ ಪಲಾಯನ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ನಝೀರ್ ಮನೆ ಹಾಗೂ ತಲೆಮರೆಸಿಕೊಳ್ಳಲು ಸಾಧ್ಯವಿರುವ ಸ್ಥಳಗಳಿಗೆ ಪೆÇಲೀಸರು ಶೋಧ ನಡೆಸಿದ್ದಾರೆ. ಈತ ವಿದೇಶಕ್ಕೆ ಹೋಗದಂತೆ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಆರೋಪಿ ನಝೀರ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಸ್ವಂತ ಮೊಬೈಲ್ ಬದಲು ಬೇರೆಯವರ ಮೊಬೈಲ್ ಬಳಸುತ್ತಿದ್ದಾನೆಯೇ ಎಂಬ ಅನುಮಾನವೂ ಪೊಲೀಸರಿಗೆ ಕಾಡಿದೆ.

ಉಳಿದ ಆರೋಪಿಗಳ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಂದ ಮಾಹಿತಿ ಕಲೆ ಹಾಕಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ ಬೋವಿಕ್ಕಾನ ಪೇಟೆಯಲ್ಲಿ ಎರಡು ತಂಡಗಳ ನಡುವೆ ನಡೆದ ಘರ್ಷಣೆಯಲ್ಲಿ ಪೆÇವ್ವಲಿನ ಅಬ್ದುಲ್ ಖಾದರ್ ಕೊಲೆಗೀಡಾಗಿದ್ದ.

ಜೊತೆಗಿದ್ದ ಪೆÇವ್ವಲ್ ಆಸಿಯಾದ್ ಮತ್ತು ಸತ್ತಾರ್ ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೆಲ ದಿನಗಳ ಹಿಂದೆ ಪುಟ್ಬಾಲ್ ಆಟದ ಸಂದರ್ಭದಲ್ಲಿ ಉಂಟಾದ ಮಾತಿನ ಚಕಮಕಿ ಕೊಲೆಗೆ ಕಾರಣವಾಗಿತ್ತು.