ಬೇಕಂತಲೇ ಯಾರೂ ಅಪಘಾತ ಮಾಡೋಲ್ಲ

ಅಪಘಾತ ಎಂಬುದೇ ಆಕಸ್ಮಿಕ ಕೆಲವೊಮ್ಮೆ ನಮ್ಮ ಬೇಜವಾಬ್ದಾರಿಯಿಂದ ಮತ್ತೆ ಕೆಲವೊಮ್ಮೆ ತಮ್ಮ ತಪ್ಪುಗಳು ಇಲ್ಲದೇ ಇದ್ದರೂ ಅಪಘಾತವಾಗುತ್ತದೆ ಆಗ ಆಗುವ ಸಾವು ನೋವು ಅಪಾರ ಇತ್ತೀಚೆಗಂತೂ ಅಪಘಾತವಾದಾಗ ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಣ ಚಾಳಿ ಹೆಚ್ಚಾಗಿದೆ ಸಹಾಯ ಮಾಡುವುದು ಮರೆತು ಹೋಗಿದೆ ಚಾಲಕರು ಕೂಡಾ ವಾಹನ ನಿಲ್ಲಿಸದೇ ಓಡಿ ಹೋಗುತ್ತಿರುತ್ತಾರೆ ಕಾರಣ ನಾವೇ ಸಹಾಯ ಮಾಡುವುದು ಬಿಟ್ಟು ಚಾಲಕ ಗಾಡಿ ನಿಲ್ಲಿಸಿದರೆ ಅವನನ್ನು ಹಿಡಿದು ಸಾಯುವವರೆಗೆ ಹೊಡೆಯುತ್ತೇವೆ ಆದ ಕಾರಣ ಗಾಯಳುಗಳನ್ನು ಚಾಲಕರು ಆಸ್ಪತ್ರೆಗೆ ಸೇರಿಸುವ ಮನಸ್ಸಿದ್ದರೂ ಓಡಿ ಹೋಗುತ್ತಿರುತ್ತಾರೆ ಕಾನೂನು ತನ್ನ ಕೆಲಸ ಮಾಡಲಿ ನಾವು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆಯೋಣ ಹಾಗೇ ಚಾಲಕರಿಗೆ ಹೊಡೆಯುವುದನ್ನು ನಿಲ್ಲಿಸೋಣ ಏಕೆಂದರೆ ಅವರು ಬೇಕಂತಲೇ ಅಪಘಾತ ಮಾಡುವುದಿಲ್ಲ

  • ಸುಕ್ಷಿತ್ ಸುವರ್ಣ  ಪಾವಂಜೆ ಹಳೆಯಂಗಡಿ

LEAVE A REPLY