ಕೂಲಿ ಕಾರ್ಮಿಕ ಆಕಸ್ಮಿಕ ಸಾವು

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಗೋಕರ್ಣ : ಇಲ್ಲಿನ ಬಸ್ ನಿಲ್ದಾಣ, ಮುಖ್ಯರಸ್ತೆ ಮುಂತಾದ ಕಡೆಗಳಲ್ಲಿ ರಸ್ತೆ ಮೇಲೆ ಬಿದ್ದ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬ ಮಂಗಳವಾರ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ.

ಮೂಲತಃ ಹಾವೇರಿ ನಿವಾಸಿ ಬಸಪ್ಪ ಮೃತಪಟ್ಟವ. ಈತನ ಕುಟುಂಬ ಅಂಕೋಲಾದಲ್ಲಿ ವಾಸಿಸುತ್ತಿದ್ದು, ತರಕಾರಿ ಮಾರಾಟ ಮಾಡಿಕೊಂಡಿದ್ದಾರೆ. ಕುಡಿತದ ಚಟ ಹೊಂದಿದ್ದ ಈತ ಇಲ್ಲಿನ ಮೇಲಿನಕೇರಿಯ ರಸ್ತೆಯ ಬದಿಯೊಂದರಲ್ಲಿ ಮಲಗಿದವ ಅಲ್ಲೇ ಸಾವನ್ನಪ್ಪಿದ್ದಾನೆ. ಗೋಕರ್ಣ ಎಸೈ ಪ್ರಕಾಶ ಭಂಟ ಪ್ರಕರಣ ದಾಖಲಿಸಿಕೊಂಡು, ಶವವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.