ಗಾಯಾಳು ಮೃತ್ಯು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ: ಕಳೆದ ಬುಧವಾರ ರಾತ್ರಿ ಮೂಡುಕೊಣಾಜೆಯಲ್ಲಿ ನಡೆದ ಬೈಕ್ ಢಿಕ್ಕಿ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂಡುಮಾರ್ನಾಡಿನ ಕಲ್ಯಾಡಿ ಮನೆಯ ಗಣೇಶ್ (29) ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದ್ದಾರೆ.

ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಗಣೇಶ್ ಬುಧವಾರ ರಾತ್ರಿ ತಮ್ಮ ಬೈಕಿನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆಗೆ ಮುಡುಕೊಣಾಜೆಯಲ್ಲಿ ಘಟನೆ ನಡೆದಿದೆ.  ಕಮಲ ಪೂಜಾರ್ತಿಯವರ ಮನೆಯ ಬಳಿ ನಿಯಂತ್ರಣ ಕಳೆದುಕೊಂಡು ಮಣ್ಣಿನ ಗೋಡೆಗೆ ಬೈಕ್ ಢಿಕ್ಕಿಯಾಗಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡ ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಣೇಶ್ ಅವರು ವಿವಾಹಿತರಾಗಿದ್ದು ಪತ್ನಿ, ಇಬ್ಬರು ಮಕ್ಕಳಿದ್ದಾರೆ.