ಬೈಕ್ ಅಪಘಾತದಲ್ಲಿ ಗಾಯಗೊಂಡವ ಮೃತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬೈಕುಗಳು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಅಂಗಡಿ ಮೊಗರು ಪರಿಸರವಾಸಿ ಸಿ ಎಚ್ ಅಬ್ದುಲ್ಲ (68) ಮೃತ ದುರ್ದೈವಿ. ಸೋಮವಾರ ರಾತ್ರಿ ಅಂಗಡಿ ಮೊಗರು ದೇಲಂಪಾಡಿಯಲ್ಲಿ ಅಪಘಾತ ಉಂಟಾಗಿತ್ತು. ಅಪಘಾತಕ್ಕೀಡದ ಸಂದರ್ಭ ಅಬ್ದುಲ್ಲರ ಜೊತೆಯಾಗಿ ಪತ್ನಿಯ ಸಹೋದರ ಕೂಡಾ ಇದ್ದರು. ಇವರನ್ನು ಕೂಡಾ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.