ಎಬಿವಿಪಿ, ಎಸ್ಸೆಫೈ ಮಂದಿಗೆ ಹಲ್ಲೆ : ಸಿಪಿಎಂ ಮುಖಂಡನ ಮನೆಗೆ ಹಾನಿ

ಸಾಂದರ್ಭಿಕ ಚಿತ್ರ

ಕಾಸರಗೋಡು : ಎಬಿವಿಪಿ ಮತ್ತು ಎಸ್ಸೆಫೈ ಕಾರ್ಯಕರ್ತರಾದ ಇಬ್ಬರು ಹಲ್ಲೆಯಿಂದ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಇದರ ಬೆನ್ನಿಗೆ ಸಿಪಿಎಂ ಮುಖಂಡನ ಮನೆಗೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಡೆದಿದೆ.

ಬೋವಿಕ್ಕಾನ ಅಮ್ಮಂಗೋಡು ನಿವಾಸಿ ಇರಿಯಣ್ಣಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿಯಾದ ಎಬಿವಿಪಿ ಕಾರ್ಯಕರ್ತ ಜಿಷ್ಣಪ್ರಸಾದ್ (17) ಮತ್ತು ಇರಿಯಣ್ಣಿ ನಿವಾಸಿ ಎಸ್ಸೆಫೈ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಮನೋಜ್ (22) ಅವರಿಗೆ ಹಲ್ಲೆ ಮಾಡಲಾಗಿದೆ. ಸೆಪ್ಟೆಂಬರ್ 13ರಂದು ಸಂಜೆ 4.30ಕ್ಕೆ 10 ಮಂದಿ ಸಿಪಿಎಂ ಕಾರ್ಯಕರ್ತರು ಹಲ್ಲೆ ಮಾಡಿದ್ದಾಗಿ ಜಿಷ್ಣು ಪ್ರಸಾದ್ ಆರೋಪಿಸಿದ್ದಾರೆ.

ಮಧ್ಯಾಹ್ನ ಅಡೂರಿಗೆ ತೆರಳಲೆಂದು ಮುಳ್ಳೇರಿಯ ಪೇಟೆಯಲ್ಲಿ ನಿಂತಿದ್ದಾಗ ಹಲ್ಲೆ ನಡೆದಿದ್ದಾಗಿ ಮನೋಜ್ ಆರೋಪಿಸಿದ್ದಾರೆ. ಈ ಘಟನೆಯ ಬಳಿಕ ಬುಧವಾರ ರಾತ್ರಿ 12 ಗಂಟೆಗೆ ಸಿಪಿಎಂ ಏರಿಯಾ ಸದಸ್ಯ ಮಂಜಕ್ಕಲ್ ಮಾಧವನ್ ಅವರ ಮನೆಗೆ ತಂಡವೊಂದು ಕಲ್ಲೆಸೆದು ಹಾನಿಗೊಳಿಸಿದೆ.