ಎಬಿವಿಪಿ ಕಾರ್ಯಕರ್ತ ಹತ್ಯೆಗೆತ್ನ

ಕಾಸರಗೋಡು : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಕಾರ್ಯಕರ್ತಗೆ ಸಿಪಿಐಎಂ ಕಾರ್ಯಕರ್ತರು ಬುಧವಾರ ಸಂಜೆ ಹತ್ಯೆಗೆತ್ನಿಸಿದ ಘಟನೆ ನಡೆದಿದೆ.

ಬೋವಿಕ್ಕಾನ ಅಮ್ಮಂಗೋಡು ನಿವಾಸಿ ಎ ವಿ ಜಿಷ್ಣುಪ್ರಸಾದ್ (17) ಹಲ್ಲೆಗೊಳಗಾದ ವಿದ್ಯಾರ್ಥಿ. ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿಯಾದ ಜಿಷ್ಣು ಸಂಜೆ ಶಾಲೆಯಿಂದ ತೆರಳುತ್ತಿದ್ದಾಗ, ಶಾಲಾ ಆವರಣ ದಾಟಿ ಹೊರಬರುತ್ತಿದ್ದಂತೆ ಮಾರಕಾಯುಧಗಳೊಂದಿಗೆ ಆಗಮಿಸಿದ ತಂಡ ಕೊಲೆಗೆತ್ನಿಸಿತು. ಆಯುಧ ದಾಳಿಯಿಂದ ತಪ್ಪಿಸಿಕೊಂಡ ಜಿಷ್ಣುವಿಗೆ ಜೀವಾಪಾಯ ಕೂದಳೆಳೆಯ ಆಂತರದಲ್ಲಿ ತಪ್ಪಿದೆ. ತಲೆ, ಕುತ್ತಿಗೆಗೆ ಭಾರೀ ಗಾಯಗಳಾಗಿ ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿನಿಲ್, ಹರಿ, ಸನಲ್, ಬಿನೀಶ್, ರಾಹುಲ್, ವಿನೋದ್ ಮೊದಲಾದ ಕಂಡರೆ ಗುರುತಿಸಬಹುದಾದವರ ತಂಡ ಹಲ್ಲೆಗೈದಿದೆ ಎಂದು ಅವರು ಆರೋಪಿಸಿದ್ದಾರೆ.