ಸಿಖ್ ಧರ್ಮಗುರುಗಳ ವಿರುದ್ಧ ಅವಹೇಳನಕಾರಿ ವೀಡಿಯೋ

ಟ್ವಿಟ್ಟರ್ ವಿರುದ್ಧ ಕೋರ್ಟ್ ನೋಟಿಸ್

ನವದೆಹಲಿ : ಸಾಕ್ಷಿ ಭಾರಧ್ವಾಜ್ ಎಂಬಾಕೆ ಟ್ವಿಟ್ಟರ್ ಖಾತೆಯಲ್ಲಿ ಸಿಖ್ ಗುರುಗಳು ಮತ್ತು ಧರ್ಮದ ವಿರುದ್ಧ ಅವಮಾನಕಾರಿ ಭಾಷಣ ಟ್ವೀಟ್ ವೀಡಿಯೋ ಅಪ್ಲೋಡ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಕೋರ್ಟೊಂದು ಟ್ವಿಟ್ಟರಿಗೆ ನೋಟಿಸು ಜಾರಿ ಮಾಡಿದೆ.

ಮುಖ್ಯವಾಗಿ ಸಿಖ್ ಸಮುದಾಯದ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ವೀಡಿಯೋ ಪೋಸ್ಟ್ ಅಥವಾ ಅಪ್ಲೋಡ್ ಮಾಡದಂತೆ ಕಳೆದ ನವಂಬರಿನಲ್ಲಿ ಗೂಗಲ್ ಇಂಡಿಯಾಕ್ಕೆ ನಿರ್ಬಂಧ ಹೇರಲಾಗಿತ್ತು.

ಕೆಲವು ವೀಡಿಯೋ ವೀಕ್ಷಿಸಿದ ಜ. ಕೌರ್ ಸಿಖ್ ಧರ್ಮದ ವಿರುದ್ಧ ಅಪ್ಲೋಡ್ ಮಾಡಲಾಗಿರುವ ಭಾರಧ್ವಾಜ್ ಸಹಿತ ಉಳಿದೆಲ್ಲ ಅವಹೇಳನಕಾರಿ ವೀಡಿಯೋ ತೆಗೆದು ಹಾಕುವಂತೆ ಗೂಗಲ್ ಇಂಡಿಯಾಕ್ಕೆ ಏಳು ದಿನಗಳ ಅವಕಾಶ ನೀಡಿದ್ದಾರೆ. ಭಾರಧ್ವಾಜಳು ಸಿಖ್ ಧರ್ಮಗುರುಗಳು ಮತ್ತು ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ವಿಡಿಯೋ ಕಳೆದ ವರ್ಷ ಅಕ್ಟೋಬರ್ 28ರಂದು ಅಪ್ಲೋಡ್ ಮಾಡಲಾಗಿದೆ.

LEAVE A REPLY