ಪತಿ ಮನೆಯವರ ನಿಂದನೆಗೆ ಬೇಸತ್ತು ಪತ್ನಿ ಸಾವಿಗೆ ಯತ್ನ

ಹೈದರಾಬಾದ್ : ಪತಿ ಸಾವಿನ ಬಳಿಕ ಆತನ ಮನೆಯವರ ಆರೋಪದಿಂದ ತೀವ್ರ ನೊಂದುಕೊಂಡಿರುವ ಮಹಿಳೆಯೊಬ್ಬಳು ನಿನ್ನೆ ಹೈದರಾಬಾದಿನ ತನ್ನ ಮನೆಯಲ್ಲಿ ಟಾಯ್ಲೆಟ್ ಕ್ಲೀನರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಕುತಪೇಟೆ ಪ್ರದೇಶದ ನಿವಾಸಿ ಸ್ವಾತಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಕೆಯ ಪತಿ ಸಾಫ್ಟ್‍ವೇರ್ ವೃತ್ತಿಯ ಮಧುಕರ್ ರೆಡ್ಡಿ ಗುಡೂರ್ ಅಮೆರಿಕದ ಸೀಟಲ್ ಎಂಬಲ್ಲಿ ಎಪ್ರಿಲ್ 4ರಂದು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ದಂಪತಿಗೆ ನಾಲ್ಕು ವರ್ಷದ ಪುತ್ರಿ ಇದ್ದಾಳೆ.