23 ವರ್ಷದಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡ ಆರೋಪಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಳೆದ ಇಪ್ಪತ್ತಮೂರು ವರ್ಷಗಳಿಂದ ಪೊಲೀಸರಿಗೆ ಸಿಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಬಿ ಅನ್ಸಾರ್(50)ನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಉಡುಪಿಯಲ್ಲಿ ಬಂಧಿಸಿದ್ದಾರೆ.

ಸುಮಾರು 35 ಲಕ್ಷ ರೂ ಮೌಲ್ಯದ ಒಂದು ಕಿಲೋ ನಿಷೇಧಿತ ಮಾದಕ ದ್ರವ್ಯ ಕೊಕೇನ್ ಸಹಿತ ಆರೋಪಿಯನ್ನು ಮಂಗಳೂರು ನಗರ ಹೊಟೇಲಿನಲ್ಲಿ 1994ರ ಫೆಬ್ರವರಿ 9ರಂದು ಬಂಧಿಸಲಾಗಿತ್ತು. ಆದರೆ ಬಳಿಕ ಆರೋಪಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಗೆ ಬಂದಿದ್ದು. ಕಳೆದ 2 ದಶಕಗಳಿಂದ ಈತ ತಲೆ ಮರೆಸಿಕೊಂಡಿದ್ದ.  ಕಸ್ಟಮ್ಸ್ ಇಲಾಖೆ ಆರೋಪಿ ಬಂಧನಕ್ಕೆ ಲುಕ್‍ಔಟ್ ನೊಟೀಸ್ ಕೂಡಾ ಹೊರಡಿಸಿತ್ತು.  ಆರೋಪಿ ಬಂಧನಕ್ಕೆ ಎಲ್ಲಾ ಕಡೆಯಿಂದಲೂ ಯತ್ನ ಸಾಗಿತ್ತು.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.