ಅಬ್ದುಲ್ ಸಲಾಂ ಹತ್ಯೆ ಆರೋಪಿಗಳನ್ನು ಹುಣಸೂರಿಗೆ ಕರೆದೊಯ್ದು ತನಿಖೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೇರಾಲ್ ಪೊಟ್ಟೋರಿ ನಿವಾಸಿ ಅಬ್ದುಲ್ ಸಲಾಂನನ್ನು ಹಾಡಹಗಲೇ ಕುತ್ತಿಗೆ ಕೊಯ್ದು ಕೊಲೆಗೈದ ಪ್ರಕರಣದ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಕರ್ನಾಟಕದ ಹುಣಸೂರಿಗೆ ಕೊಂಡೊಯ್ಯಲಾಗಿದೆ.

ಕುಂಬಳೆ ಬದ್ರಿಯಾನಗರದ ಅಬೂಬಕರ್ ಯಾನೆ ಮಾಂಙಮುಡಿ ಸಿದ್ದಿಕ್, ಪೇರಾಲಿನ ಉಮ್ಮರ್ ಫಾರೂಕ್, ಪೆರುವಾಡನ ಸಹೀರ್, ಪೇರಾಲಿನ ನಿಯಾಸ್ , ಆರಿಕ್ಕಾಡಿಯ ಹರೀಶ್, ಮೊಗ್ರಾಲ್ ಮಾಳಿಯಂಗರ ಕೋಟದ ಲತೀಫ್ ಎಂಬುವವರನ್ನು ಅಬ್ದುಲ್ ಸಲಾಂ ಕೊಲೆ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ಇವರನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿತ್ತು. ಈ ಪೈಕಿ ನಿಯಾಸ್ ಹಾಗೂ ಸಿದ್ದಿಕರನ್ನು ಹೆಚ್ಚಿನ ತನಿಖೆಗಾಗಿ ಹುಣಸೂರಿಗೆ ಕರೆದೊಯ್ಯಲಾಗಿದೆ. ಕೊಲೆ ಕೃತ್ಯದ ಬಳಿಕ ತಲೆಮರೆಸಿಕೊಂಡ ಆರೋಪಿಗಳು ಕರ್ನಾಟಕದ ಹುಣಸೂರು ಸಹಿತ ವಿವಿಧೆಡೆ ತಂಗಿದ್ದರೆನ್ನಲಾಗಿದೆ. ಏಪ್ರಿಲ್ 30ರಂದು ಅಬ್ದುಲ್ ಸಲಾಂರನ್ನು ಕೊಲೆಗೈಯ್ಯಲಾಗಿತ್ತು.