ಅನಾಥ ಕಾರು ಪೊಲೀಸ್ ವಶ

ಸಾಂದರ್ಭಿಕ ಚಿತ್ರ

ಪುತ್ತೂರು : ಪರ್ಪುಂಜದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೇರಳ ನೋಂದಣಿಯ ಅನಾಥ ಕಾರನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹತ್ತು ದಿನಗಳ ಹಿಂದೆ ಕಾರನ್ನು ರಸ್ತೆ ಬದಿ ಮರದಡಿಯಲ್ಲಿ ನಿಲ್ಲಿಸಲಾಗಿತ್ತು. ಕಾರು ಚಾಲೂ ಆಗುತ್ತಿಲ್ಲ ಎಂಬ ಕಾರಣಕ್ಕೆ ಅದನ್ನು ಬಿಟ್ಟು ಹೋಗಿದ್ದರು. ಈ ಕುರಿತು ನಾಗರಿಕರು ಆತಂಕ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ ಕಾರಣ ಕಾರನ್ನು ಠಾಣೆಗೆ ಸಾಗಿಸಿದ್ದಾರೆ.