ಕೃಷಿ ಬೇಡಿಕೆ ಆಗ್ರಹಿಸಿ ಆಪ್ ಕಾರ್ಯಕರ್ತರಿಂದ ಡೀಸಿ ಕಚೇರಿ ಎದುರು ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ವಿವಿಧ ಬೇಡಿಕೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ (ಆಪ್)ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಹಲವಾರು ಮಂದಿ ಪಾಲ್ಗೊಂಡರು.
ಕೃಷಿ ಪಿಂಚಣಿ ನೀಡಬೇಕು, ಭತ್ತ ಕೃಷಿ ಸೇರಿದಂತೆ ಎಲ್ಲಾ ಕೃಷಿ ಕೆಲಸವನ್ನೂ ಉದ್ಯೋಗ ಖಾತರಿ ಯೋಜನೆಯಡಿ ಅಳವಡಿಸಬೇಕು, ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಐಕ್ಯವೇದಿ ಕನ್ವೀನರ್ ಪ್ರತಿಭಟನೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ನಮ್ಮ ರಾಜ್ಯದ ಮಂತ್ರಿಗಳಿಗೆ ಬಾಯಿಗೆ ಬಂದ ರೀತಿ ಹೇಳಿಕೆ ನೀಡುವ ಅಧಿಕಾರವನ್ನು ಕೊಟ್ಟವರು ಯಾರು, ಯಾವುದೇ ಹೇಳಿಕೆ ನೀಡುವ ಮೋದಲು ಅದನ್ನು ಅನುಷ್ಟಾನಕ್ಕೆ ತರುವ ಅಲ್ಪ ಸಿದ್ಧ್ದತೆ ಮಾಡಿರಬೇಕು. ಈ ಮಾತನ್ನು ಯಾಕೆ ಹೇಳಬೇಕಾಯಿತೆಂದರೆ ಖರೀದಿಸಿದ ಸಾಮಗ್ರಿಗಳಿಗೆ ಏಳು ತಿಂಗಳಿನಿಂದ ಸಂಬಂಧಪಟ್ಟವರು ಯಾವುದೇ ಪ್ರತಿಫಲವನ್ನು ನೀಡದೆ ಸತಾಯಿಸುತ್ತಿರುವಾಗ ಇದರ ಮಧ್ಯೆ ಪ್ರವೇಶಿಸಿ ನಾಳೆಯೇ ಇದಕ್ಕೊಂದು ಇತ್ಯರ್ಥ ಕಂಡು ಕೊಳ್ಳುತ್ತೇನೆಂದು ಹೇಳುತ್ತಿರುವ ಸಚಿವರು, ಜನಪ್ರತಿನಿಧಿಗಳು ಯಾಕೆ ಅದನ್ನು ಸಾಕಾರಗೊಳಿಸುತ್ತಿಲ್ಲ” ಎಂದು ಅವರು ಪ್ರಶ್ನಿಸಿದರು.