ಗುಡ್ಡ ಕುಸಿತ ತಡೆಯಲು ಕ್ರಮಕ್ಕೆ ಆಪ್ ಮನವಿ

ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ತಹಶೀಲ್ದಾರ ಮೇಘರಾಜ ನಾಯ್ಕ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು

ನಮ್ಮ ಪ್ರತಿನಿಧಿ ವರದಿ

ಕುಮಟಾ : ಚತುಷ್ಪಥಕ್ಕಾಗಿ ಐಆರ್ಬಿ ಕಂಪೆನಿಯವರು ಕೈಗೊಂಡ ಅವೈಜ್ಞಾನಿಕ ಕಾಮಗಾರಿಯಿಂದ ಸಂಭವಿಸ ಬಹುದಾದ ಗುಡ್ಡ ಕುಸಿತವನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ತಹಶೀಲ್ದಾರ ಮೇಘರಾಜ ನಾಯ್ಕ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಚತುಷ್ಪಥ ಕಾಮಗಾರಿಯ ನಿಮಿತ್ತ ಕರಾವಳಿಯ ಭಾಗದ ಗುಡ್ಡಗಳನ್ನು ಐಆರ್ಬಿ ಕಂಪೆನಿಯು ಅವೈಜ್ಞಾನಿಕವಾಗಿ ಕತ್ತರಿಸಿದೆ. ಇದರಿಂದ ಮಳೆಯ ರಭಸಕ್ಕೆ ಗುಡ್ಡಗಳು ಕುಸಿದು ಭಾರಿ ಹಾನಿ ಸಂಭವಿಸುವ ಜೊತೆಗೆ ಹೆದ್ದಾರಿ ಸಂಚಾರ ಅಪಾಯಕಾರಿಯಾಗಿದೆ. ಹಾಗಾಗಿ ಗುಡ್ಡ ಕುಸಿಯುವ ಸಾಧ್ಯತೆ ಇರುವ ಸ್ಥಳವನ್ನು ಗುರುತಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ತಾಲೂಕಾಡಳಿತ ಹಾಗೂ ಅರಣ್ಯ ಇಲಾಖೆಯವರು ಕೂಡ ಚತುಷ್ಪಥ ಕಾಮಗಾರಿಗೆ ಸಹಕಾರ ನೀಡಿ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ನೀಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.