ನಟನಾರಂಗಕ್ಕೆ ಆಮೀರ್ ಪುತ್ರ

ಆಮೀರ್ ಖಾನನಿಗೆ ಮೊದಲ ಪತ್ನಿ ರೀನಾ ದತ್ತ ಜೊತೆಗಿನ ದಾಂಪತ್ಯದಿಂದ ಜುನೈದಾ ಎನ್ನುವ ಮಗ ಹಾಗೂ ಇರಾ ಎನ್ನುವ ಮಗಳಿದ್ದು ಮಗ ಈಗ ನಟನಾಕ್ಷೇತ್ರಕ್ಕೆ ಕಾಲಿಟ್ಟಿದ್ದಾನೆ. 24 ವರ್ಷದ ಜುನೈದಾ ಹೆಸರಾಂತ ನಿರ್ದೇಶಕ ಖುಸಾರ್ ಥಾಕೋರ್ ಪದಮಸೀಯವರ `ಮದರ್ ಕರೇಜ್ ಆಂಡ್ ಹರ್ ಚಿಲ್ಡ್ರನ್’ ಎನ್ನುವ ನಾಟಕದಲ್ಲಿ ಅಭಿನಯಿಸಲಿದ್ದಾನೆ. ಈ ನಾಟಕ ನ್ಯಾಷನಲ್ ಸೆಂಟರ್ ಫಾರ್ ದ ಪರ್ಫಾರ್ಮಿಂಗ್ ಆಟ್ರ್ಸ್‍ನಲ್ಲಿ ಅಗಸ್ಟ್ 19, 20ಕ್ಕೆ ಪ್ರದರ್ಶಿತಗೊಳ್ಳಲಿದೆ.

ಜುನೈದಾ ಖಾನ್ ಈಗಾಗಲೇ ಥಿಯೇಟ್ರಿಕ್ಸ್‍ನಲ್ಲಿ ಪದವಿ ಪಡೆದಿದ್ದು ಮಾತ್ರವಲ್ಲದೇ ಲಾಸ್ ಏಂಜಲೀಸಿನಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಡ್ರಮೆಟಿಕ್ ಆಟ್ರ್ಸ್‍ನಲ್ಲಿ ಸಹ ಡಿಗ್ರಿ ತೆಗೆದುಕೊಂಡಿದ್ದಾನೆ. ಅದಲ್ಲದೇ `ಪೀಕೆ’ ಚಿತ್ರದಲ್ಲಿ ನಿರ್ದೇಶಕ ರಾಜಕುಮಾರ ಹಿರಾನಿ ಜೊತೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದ.

ಪದಮಸೀಯವರಿಗೆ ಮೊದಲು ಜುನೈದಾ ಆಮೀರ್ ಮಗ ಎನ್ನುವುದು ಗೊತ್ತಿರಲಿಲ್ಲವಂತೆ. ಸಾಮಾನ್ಯರಂತೆ ಆಡಿಶನ್ನಿಗೆ ಬಂದು ಡ್ರಾಮಾ ಬಗ್ಗೆ ಆತನಿಗಿರುವ ಇಂಟರೆಸ್ಟ್ ಹಾಗೂ ಜ್ಞಾನದಿಂದಲೇ ಆತ ಸೆಲೆಕ್ಟ್ ಆಗಿದ್ದು ಈಗ 8ರಿಂದ 10 ತಾಸು ಡ್ರಾಮಾಗಾಗಿ ರಿಹರ್ಸಲ್ ಮಾಡುತ್ತಿದ್ದಾನಂತೆ. ಈ ಡ್ರಾಮಾದಲ್ಲಿ ಕೆಲವಾರು ಪಾತ್ರಗಳನ್ನು ಆತ ನಿರ್ವಹಿಸಲಿದ್ದಾನಂತೆ. ಎಷ್ಟೆಂದರೂ ಮಿ ಪರ್ಫೇಕ್ಷನಿಸ್ಟ್ ಮಗನಲ್ಲವೇ…