ಚೀನಾದಲ್ಲಿಯೂ `ದಂಗಲ್’ ಕಮಾಲ್

ಭಾರತೀಯ ಚಿತ್ರರಂಗ ಈಗ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಿಗೂ ಪೈಪೆÇೀಟಿ ನೀಡುವಷ್ಟರ ಮಟ್ಟಿಗೆ ಬೆಳೆಯುತ್ತಿದೆ. `ಬಾಹುಬಲಿ-2′ ಸಿನಿಮಾ 1,000 ಕೋಟಿ ರೂ ಗಳಿಕೆ ಮೂಲಕ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಬೆನ್ನಲ್ಲೇ ಈಗ ಆಮೀರ್ ಖಾನ್ ಅಭಿನಯದ `ದಂಗಲ್’ ಚೀನಾದಲ್ಲಿ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 100 ಕೋಟಿ ರೂಗೂ ಅಧಿಕ ಗಳಿಸಿರುವ ಸುದ್ದಿ ಬಂದಿದೆ.

ಕರಾಟೆ, ಕುಂಗ್‍ಫು ಸಿನಿಮಾಗಳ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ಚೀನಾ, ಕುಸ್ತಿ ಕಥಾವಸ್ತುವಿನ `ದಂಗಲ್’ ಸಿನಿಮಾಗೆ ಫಿದಾ ಆಗಿದೆ. ಚೀನಾದಲ್ಲಿ ಭಾರತೀಯ ಚಿತ್ರವೊಂದು ಈ ಮಟ್ಟಕ್ಕೆ ಸದ್ದು ಮಾಡಿರುವುದು ಇದೇ ಮೊದಲು. ಬೀಜಿಂಗ್ ಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡ `ದಂಗಾಲ್’ ಚೀನಿಯರ ಅಪಾರ ಮೆಚ್ಚುಗೆ ಗಳಿಸಿತು. ಕುಸ್ತಿಪಟು ಮಹಾವೀರ್ ಸಿಂಗ್ ಪೆÇೀಗಟ್ ಜೀವನಗಾಥೆಯನ್ನು ಚೀನಿಯರು ತಮ್ಮ ನೆಲದ ಕುಸ್ತಿಯಾಧರಿತ ಸ್ಪರ್ಧೆಗೆ ಹೋಲಿಸಿ ನೋಡಿದ್ದಾರೆ ಎಂದೇ ಹೇಳಬಹುದು.