ಪಾಕಿನಲ್ಲಿ ಭಾರತ ರಾಷ್ಟ್ರಗೀತೆಯಿಲ್ಲದ `ದಂಗಲ್’ ರಿಲೀಸಿಗೆ ಆಮೀರ್ ನಕಾರ

ನವದೆಹಲಿ : `ದಂಗಲ್’ ಚಿತ್ರದಲ್ಲಿರುವ ಭಾರತದ ಧ್ವಜ ಮತ್ತು ರಾಷ್ಟ್ರಗೀತೆಗಳಿರುವ ಎರಡು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವಂತೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ಬೇಡಿಕೆ ಇಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಾಲಿವುಡ್ ನಟ-ನಿರ್ಮಾಪಕ ಆಮೀರ್ ಖಾನ್, ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆಗೊಳಿಸದಿರಲು ನಿರ್ಧರಿಸಿದ್ದಾರೆ.