ಸುನಿಲ್ ಶೆಟ್ಟಿ ಮಗ ಚಿತ್ರರಂಗಕ್ಕೆ

ಸ್ಟಾರ್ ಕಿಡ್ಸ್ ಒಬ್ಬೊಬ್ಬರಾಗಿ ಬಾಲಿವುಡ್ಡಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಮ್ಮ ಕುಡ್ಲದ ಸುನಿಲ್ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಹೊಡೆದಾಯಿತು. ಈಗ ಸುನಿಲ್ ಮಗ ಅಹಾನ್ ಶೆಟ್ಟಿ ಕೂಡಾ ಸಿನಿಮಾ ರಂಗಕ್ಕೆ ಬರುತ್ತಿದ್ದಾನೆ. ಈ ವಿಷಯವನ್ನು ಖುದ್ದು ಸುನಿಲ್ ಟ್ವೀಟ್ ಮಾಡಿ ಬಹಿರಂಗಪಡಿಸಿದ್ದಾರೆ. ಅಹಾನ್ ಸಾಜಿದ್ ನಾಡಿಯಾವಾಲಾ ಸಿನಿಮಾದ ಮೂಲಕ ಬಾಲಿವುಡ್ಡಿಗೆ ಕಾಲಿಡುವುದು ಫೈನಲೈಸ್ ಆಗಿದೆಯಂತೆ.

ಇನ್ನೂ 21ರ ಹರೆಯದ ಅಹಾನ್ ಈಗಾಗಲೇ ನಟನಾ ತರಬೇತಿಯನ್ನು ಪಡೆದಿದ್ದಾನೆ. ಮಾರ್ಷಿಯಲ್ ಆಟ್ರ್ಸ್‍ನಲ್ಲಿ ಟ್ರೈನಿಂಗ್ ಕೂಡಾ ಪಡೆದಿದ್ದು ಹೀರೋಗೆ ಬೇಕಾದ ಬಾಡಿಯನ್ನೂ ಹೊಂದಿದ್ದಾನೆÉ. ಸಂಗೀತದಲ್ಲೂ ಆಸಕ್ತಿ ಇರುವ ಅಹಾನ್ ಚೆನ್ನಾಗಿ ಗಿಟಾರ್ ಬಾರಿಸುತ್ತಾನೆ. ಜೊತೆಗೇ ಮ್ಯೂಸಿಕ್ ಬ್ಯಾಂಡ್ ಒಂದರಲ್ಲಿ ಅವನು ಮುಖ್ಯ ಹಾಡುಗಾರ ಕೂಡಾ. ತನ್ನ ಇನ್ಸ್ಟಾಗ್ರಾಮ್ ಅಕೌಂಟಿನಲ್ಲಿ ತನ್ನ ಡಿಫ್ರೆಂಟ್ ಫೋಸಿನ ಫೋಟೋಗಳನ್ನು ಅಹಾನ್ ಹಾಕಿದ್ದು ಆಗಲೇ ಸಿನಿಮೇಕರ್ಸ್ ಗಮನ ಸೆಳೆದಿದ್ದಾನೆ.