ಇಂದು ತೆರೆಯ ಮೇಲೆ `ರಾಗ’

ಈ ವಾರ ರಿಲೀಸ್ ಆಗಲಿರುವ ಕನ್ನಡ ಚಿತ್ರಗಳಲ್ಲಿ `ರಾಗ’ ಸಿನಿಮಾದ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಮಿತ್ರ ಎಂಟರ್‍ಟೈನರ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, `ರಾಗ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಜನರಿಗೆ ಇಷ್ಟವಾಗಿದೆ.

ಹಾಸ್ಯನಟನಾಗಿ ಇಷ್ಟು ದಿನ ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದ್ದ ಮಿತ್ರ ಅವರು ಚಿತ್ರದಲ್ಲಿ ಕಣ್ಣಿಲ್ಲದವನ ಪಾತ್ರ ನಿರ್ವಹಿಸಿದ್ದಾರೆ. ಮಿತ್ರರೇ ಈ ಸಿನಿಮಾದ ನಿರ್ಮಾಪಕರು ಕೂಡಾ. ಸಿನಿಮಾದ ನಾಯಕಿ ಭಾಮಾ ಕೂಡಾ ಈ ಚಿತ್ರದಲ್ಲಿ ಅಂಧಳು. ಮಿತ್ರ ಅವರು ಒಬ್ಬರು ಥಿಯೇಟರ್ ಕಲಾವಿದರು. 600ಕ್ಕೂ ಹೆಚ್ಚು ಶೋ ನೀಡಿರುವ ಅವರು ಕಾಮಿಡಿ ಶೋದಲ್ಲೂ ಮಿಂಚಿದವರು. ಟೀವಿ ಧಾರಾವಾಹಿಗಳಲ್ಲಿ ಹಾಗೂ ಕೆಲವು ಚಿತ್ರಗಳಲ್ಲಿ ನಟಿಸಿರುವ ಮಿತ್ರ ಈಗ ತನ್ನದೇ ನಿರ್ಮಾಣದ ಚಿತ್ರದಲ್ಲಿ ಹೀರೋ. ಇಷ್ಟು ದಿನ ಕಾಮಿಡಿಯನ್ನಾಗಿದ್ದವರು ಈಗ ಇಮೋಶನಲ್ ಪಾತ್ರ ಮಾಡಿದ ಬಗ್ಗೆ ಮಾತಾಡುತ್ತಾ “ಇದೊಂದು ಜೀವನದಲ್ಲೇ ಒಂದು ಮಹತ್ವವಾದ ಅನುಭವ ನೀಡಿದೆ” ಎನ್ನುತ್ತಾರೆ ಮಿತ್ರ.

ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಅವಿನಾಶ್, ಜೈ ಜಗದೀಶ್, ರಮೇಶ್ ಭಟ್, ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ ಮುಂತಾದವರು ತಾರಾಗಣದಲ್ಲಿದ್ದಾರೆ.