`ಆಧಾರ್’ಗೆ ಇನ್ನಷ್ಟು ಕಷ್ಟ

ಜ 17ರಂದು ಸುಪ್ರೀಂ ಪಿಐಎಲ್ ವಿಚಾರಣೆ

ನವದೆಹಲಿ : ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ನಡೆಸಿದೆಯೆನ್ನಲಾದ ಹಲವಾರು ಉಲ್ಲಂಘನೆಗಳ ಬಗ್ಗೆ ಕಲ್ಯಾಣಿ ಸೇನ್ ಮೆನನ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದರ ಮೇಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 17ರಂದು ಕೈಗೆತ್ತಿಕೊಳ್ಳುವ ಸೂಚನೆಯಿದೆ.

ಇತ್ತೀಚೆಗೆ ಆಧಾರ್ ಮಾಹಿತಿ ಸೋರಿಕೆಯ ಬಗ್ಗೆ ದಿ ಟ್ರಿಬ್ಯೂನ್ ಪ್ರಕಟಿಸಿದ ವರದಿಯ ಹಿನ್ನೆಲೆಯಲ್ಲಿ ಈ ಪ್ರಕರಣ ಇನ್ನಷ್ಟು ಮಹತ್ವ ಪಡೆದಿದೆ. ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿಯೇ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಆಧಾರ್ ಯೋಜನೆ ಆರಂಭಗೊಂಡಂದಿನಿಂದ 34,000 ಆಧಾರ್ ಆಪರೇಟರುಗಳನ್ನು ಕಪ್ಪು ಪಟ್ಟಿಗೆ ಸೇರಿಸಿರುವ ಅಥವಾ ಅವರ ಸೇವೆಗಳನ್ನು ರದ್ದು ಪಡಿಸಿರುವ ಬಗ್ಗೆ ಸಂಸತ್ತಿನಲ್ಲಿ ಹೇಳಿದ್ದರು. ಇಂತಹ ಒಬ್ಬ ಆಪರೇಟರ್ ಮುಖಾಂತರವೇ ದಿ ಟ್ರಿಬ್ಯೂನ್ ಪತ್ರಕರ್ತೆ ಆಧಾರ್ ಮಾಹಿತಿ ಪಡೆದಿದ್ದಿರಬಹುದೆಂಬ ಶಂಕೆಯಿದೆ.

ಜನರ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸುತ್ತಿರುವ ಹಾಗೂ ಅಕ್ರಮಗಳನ್ನು ನಡೆಸುತ್ತಿರುವ ಆಪರೇಟರುಗಳ ಸಂಖ್ಯೆ ಎಪ್ರಿಲ್ 2017ರಿಂದ 49,000ಕ್ಕೇರಿರಬಹುದು ಎಂದು ಕೆಲ ವರದಿಗಳಿಂದ ತಿಳಿದು ಬರುತ್ತಿವೆ ಎಂದು ಮೆನನ್ ತಮ್ಮ ಅಪೀಲಿನಲ್ಲಿ ಹೇಳಿದ್ದಾರೆ.

LEAVE A REPLY