ಯುವಜನರ ಸಮಯ ವ್ಯರ್ಥ

ಐಪಿಎಲ್ 10ನೇ ಆವೃತ್ತಿಯು ಈಗಾಗಲೇ ಪ್ರಾರಂಭಗೊಂಡಿದೆ. ದೇಶದ ಹಲವಾರು ಕಡೆ ಘನ ಪಾರ್ಕ್ ಮೂಲಕ ದೊಡ್ಡ ಪರದೆಯಲ್ಲಿ ಉದ್ಘಾಟನಾ ಪಂದ್ಯಾವಳಿಯ ನೇರ ಪ್ರಸಾರ ಮಾಡಿರುವುದರಿಂದ ಸಾವಿರಾರು ಯುವಕ, ಯುವತಿಯರು ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸುತ್ತ ಸಂಭ್ರಮಿಸಿದರು. ವರ್ಷ ವರ್ಷವೂ ಬರುವ ಈ ಚುಟುಕು ಆಟಕ್ಕೆ ನಮ್ಮ ಯುವ ಸಮುದಾಯ ಮೀಸಲಿಡುವ ಸಮಯವನ್ನು ನೆನೆದಾಗ ಬೇಸರವಾಗುತ್ತದೆ. ಸಂಭ್ರಮ ಬೇಕು. ಆದರೆ ಮಿತಿಯಲ್ಲಿರಬೇಕಲ್ಲವೇ

  • ಪ್ರಥಮ್ ಶೆಟ್ಟಿ  ಕಲ್ಲಡ್ಕ