ಯಕ್ಷಗಾನದಲ್ಲೊಂದು ವಿಮಾನರಾಗ

ಇತ್ತೀಚೆಗೆ ಬಹಳ ಜನಪ್ರಿಯಗೊಂಡಿರುವ ಕಲೆ ಎಂದೆನ್ನಲಾಗಿರುವ ಯಕ್ಷಗಾನದಲ್ಲಿ ಹೊಸ ಹೊಸ ಪ್ರಯೋಗ ನಡೆದುಕೊಂಡು ಬರುತ್ತಿದೆ ಹಾಡುಗಾರಿಕೆಯಲ್ಲಿ ನಾಟ್ಯದಲ್ಲಿ ವೇಷಭೂಷಣಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಾ ಪ್ರಸಿದ್ಧಿಯ ಮೆಟ್ಟಿಲುಗಳನ್ನು ಭರದಿಂದ ಮೇಲೇರುತ್ತಿರುವ ಕಲಾವಿದರನ್ನು ನಾವಿಂದು ಕಾಣಬಹುದು ಇಂತಹ ಕಲಾವಿದರು ಮಾಡಿದ್ದು ಸರಿಯೇ ಎಷ್ಟು ಸರಿ ಎಷ್ಟು ತಪ್ಪು ಎಂದು ಹೇಳುವವರಿಲ್ಲದ ಕಾರಣ ಇಂತಹ ಹೊಸ ಹೊಸ ಪ್ರಯೋಗಗಳು ಮುಂದುವರಿಯುತ್ತಲೇ ಹೋಗುತ್ತಿವೆ ಅದರೊಂದಿಗೆ ಸಭಿಕರ ಚಪ್ಪಾಳೆಗಳೂ ಸೇರುತ್ತವೆ ಇದೊಂದು ಮಹತ್ಸಾಧನೆ ಎಂದು ಕಲಾವಿದರೂ ಅವರ ಅಭಿಮಾನಿಗಳೂ ಭಾವಿಸುತ್ತಾರೆ ಅಂತಹ ಒಂದು ಪ್ರಯೋಗ ಹಾಡುಗಾರಿಕೆಯಲ್ಲಿ ವಿಮಾನರಾಗದ ಬಳಕೆ ವಿಮಾನರಾಗ ಎಂಬುದು ಇಲ್ಲವಾದರೂ ಇನ್ನು ಆ ಹೆಸರು ಕೆಲವು ಯಕ್ಷಗಾನದ ಹಾಡುಗಾರಿಕೆಗೆ ಬರಬಹುದು ಎಂದು ಕಾಣುತ್ತದೆ ಭಾಗವತರು ಒಂದು ಪದ್ಯ ಹಾಡಲು ಆರಂಭಿಸಿ ಮುಂದೆ ಆಲಾಪನೆಗೆ ತೊಡಗುತ್ತಾರೆ ಆ ಆಲಾಪನೆಯ ಸ್ವರ ಮಂದ್ರಕ್ಕಿಂತಲೂ ಕೆಳಗಿನ ಸ್ಥಾಯಿಗೆ ಹೋಗುತ್ತಾ ಹೋಗುತ್ತಾ ಹೇಗಾಗುತ್ತದೆಂದರೆ ಒಂದು ವಿಮಾನ ನೆಲದ ಮೇಲೆ ಓಡಿದ ಅನುಭವವನ್ನು ಕೊಡುತ್ತದೆ ವಿಮಾನ ನೆಲದಡಿಗೆ ಹೋಗಿ ಬಿಟ್ಟಿತೋ ಎನ್ನುವಷ್ಟು ಸ್ಥಾಯಿ ನೀಚವಾಗುತ್ತದೆ ಆ ಬಳಿಕ ಮುಂದಿನ ಹಂತ ವಿಮಾನದ ಟೇಕಾಫ್ ಸ್ಥಾಯಿ ನಿಧಾನಗತಿಯಲ್ಲಿ ಏರುತ್ತಾ ಏರುತ್ತಾ ಉಚ್ಚವನ್ನು ದಾಟಿ ಮತ್ತು ಮೇಲೆ ಹೋಗುತ್ತದೆ ವಿಮಾನ ರನ್ ವೇಯಲ್ಲಿ ವೇಗವಾಗಿ ಓಡಿ ಗಗನಕ್ಕೇರಿದಂತೆ ಶೋತೃಗಳಿಗೆ ಭಾಸವಾಗುತ್ತದೆ ಉಚ್ಛ ಸ್ಥಾಯಿಯ ಸ್ವರ ಶೀರಲಾಗುತ್ತಾ ಕೊನೆಗೆ ಮಾಯವಾದಾಗ ವಿಮಾನ ಬಹುದೂರ ತಲುಪಿತೆಂದು ಶೋತೃಗಳು ನಿಟ್ಟುಸಿರಿ ಬಿಟ್ಟು ಸಮಾಧಾನಗೊಳ್ಳುತ್ತಾರೆ ದೇವಿ ಮಹಾತ್ಮೆಯಲ್ಲಿ ಬರುವ ಚಂಡ ಮುಂಡದ ಮೃಗಯಾ ವಿಹಾರ ಸಂದರ್ಭದ ಪದ್ಯ ಈ ಪ್ರಯೋಗಕ್ಕೆ ಹೆಚ್ಚಾಗಿ ಆರಿಸಲ್ಪಡುತ್ತದೆ ಚಂಡ ಮುಂಡರು ಬೇಟೆಯಾಡಿ ಆಯಾಸಗೊಂಡು ಉಸಿರಾಡುವ ಗಾಳಿಗಾಗಿ ಬೆಟ್ಟ ಹತ್ತುವ ದೃಶ್ಯವಿದೆ ಅದನ್ನೇ ಭಾಗವತರು ನೆಲದಿಂದ ಆಕಾಶಕ್ಕೇರುವ ವಿಮಾನದ ರೂಪಕದಲ್ಲಿ ಹಾಡುತ್ತಾರೆ ಕಲಾವಿದರು ಕೂಡಾ ತಮ್ಮ ಅಭಿನಯದ ಮೂಲಕ ನೆಲದಿಂದ ಸ್ವಲ್ಪ ಸ್ವಲ್ಪವೇ ಮೇಲೇರುವ ಅಭಿನಯ ಮಾಡುತ್ತಾರೆ ಹೊಸದನ್ನು ಮಾಡಬೇಕೆನ್ನುವ ತೀವ್ರ ತವಕದಲ್ಲಿರುವ ಪ್ರಸಿದ್ಧ ಕಲಾವಿದರು ಕಂಡು ಹಿಡಿಯುವ ವಿಮಾನರಾಗ ಎನ್ನಬಹುದಾದ ಹಾಡುಗಾರಿಕೆಯ ಹೊಸ ಪ್ರಯೋಗಗಳು ಜನರನ್ನು ಎಷ್ಟು ಕಾಲ ತನ್ನೊಂದಿಗೆ ಒಯ್ಯಬಹುದು ಎಂಬುದೇ ಪ್ರಶ್ನೆ

  • ಮಹೇಶ್ ಎಂ  ಕಂಕನಾಡಿ ಮಂಗಳೂರು