ಕಣ್ಣಂಗಾರ್ ಉರೂಸಿನಲ್ಲಿ ಯುವ ಸಮೂಹಕ್ಕೆ ಮನಮುಟ್ಟುವ ಭಾಷಣ

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ದುಷ್ಟ ಶಕ್ತಿಗಳು ಯತ್ನ ನಡೆಸುತ್ತಿವೆ. ಇದಕ್ಕೆ ಯಾರೂ ಬಲಿಯಾಗಬೇಡಿ. ಓರ್ವ ವ್ಯಕ್ತಿಯನ್ನು ವಿನಾಕಾರಣ ಕೊಲೆ ಮಾಡಿದರೆ ಇಡೀ ಮಾನವ ಕುಲವನ್ನೇ ಕೊಂದ ಪಾಪ ಅವರ ಮೇಲೆ ಇರುತ್ತದೆ. ಈ ನಿಟ್ಟಿನಲ್ಲಿ ಯುವ ಜನತೆ ಎಚ್ಚರಿಕೆಯಿಂದ ಇರಬೇಕು’ ಎಂದು ಸಯ್ಯದ್ ಇಬ್ರಾಹಿಂ ಖಲೀಲ್ ತಂಞಳ್ ಅಲ್ ಬುಖಾರಿ ಕಡಲುಂಟಿಯವರು ಕಣ್ಣಂಗಾರ್ ಊರುಸ್ ಸಮಾರಂಭದಲ್ಲಿ ನೀಡಿದ ಕರೆ ನಿಜಕ್ಕೂ ಮನಮಟ್ಟುವಂತಿತ್ತು
ಇಂದಿನ ದಿನಗಳಲ್ಲಿ ಯಾವುದೇ ದಿನಪತ್ರಿಕೆಯ ಪುಟ ತಿರುವಿದರೂ ಯಾವುದೇ ನ್ಯೂಸ್ ಚ್ಯಾನೆಲ್ ಬದಲಾಯಿಸುತ್ತಾ ಇದ್ದರೂ ನಮಗೆ ಕಾಣ ಸಿಗುವುದೊಂದೇ ಸುದ್ದಿ  ಕೊಲೆ  ಯುವ ಸಮುದಾಯವನ್ನು ಕೆಟ್ಟ ದಾರಿಯಿಂದ ಸನ್ಮಾರ್ಗದತ್ತ ತಿರುಗಿಸುವುದರ ಬಗ್ಗೆ ಇಂದು ಯಾವೊಂದು ಧರ್ಮಗುರುಗಳೂ ಮನಸ್ಸು ಮಾಡುತ್ತಿಲ್ಲ  ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮಗುರುಗಳು ದೇವಸ್ಥಾನ ಮಸೀದಿ ಚರ್ಚ್‍ಗಳಲ್ಲಿ ತಂತಮ್ಮ ಧರ್ಮಗಳ ಯುವ ಜನತೆಗೆ ಸರಿಯಾದ ಬೋಧನೆ ಉಪದೇಶ ನೀಡುತ್ತಾ ಬಂದರೆ ಜತೆಗೆ ಕೊಲೆ ಅನ್ಯಾಯ ಅಧರ್ಮಗಳ ಬಗ್ಗೆ ಮೇಲಿನ ಧರ್ಮಗುರುಗಳು ಹೇಳಿದಂತೆ ಭಗವಂತನ ಬಗ್ಗೆ ಭಯ ಹುಟ್ಟಿಸಿದರೆ ಮಾತ್ರ ದಾರಿ ತಪ್ಪುತ್ತಿರುವ ಇಂದಿನ ಯುವಕ ಜನತೆ ಮನ ಪರಿವರ್ತಿತರಾಗಲು ಖಂಡಿತಾ ಸಾಧ್ಯ

  • ಕೆ ದಿವಾಕರ ಆಚಾರ್ಯ  ಕಾವೂರು