ಮೌಢ್ಯ ಖಂಡಿಸುತ್ತಿರುವ ವಿಚಾರವಾದಿಗಳ ತಂಡ

 ಬೆಂಗಳೂರು : ಅಧ್ಯಾಪಕ ವೃತ್ತಿಯು ಅವರನ್ನು ತರಗತಿಗೆ ಸೀಮಿತಗೊಳಿಸಲಿದೆ. ಆದರೆ ಅದು ಅವರನ್ನು ಬೆಳೆಯುತ್ತಿರುವ ವಿಚಾರವಾದಿಗಳ ಸೇನೆಯ ಭಾಗವಾಗುವುದನ್ನು ತಡೆದಿಲ್ಲ. ಅವರು ಮೂಢನಂಬಿಕೆಗಳ ಬಗ್ಗೆ ಸ್ಥಳೀಯರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಮತ್ತು ಮಾಂತ್ರಿಕರ ಸುಳ್ಳುಗಳನ್ನು ಬಹಿರಂಗಪಡಿಸುವ ವೈಚಾರಿಕ ಪ್ರಜ್ಞೆಗಳನ್ನು ಬೆಳೆಸುತ್ತಿದ್ದಾರೆ.

ಹಾಸನದ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಅಧ್ಯಾಪಕರಾಗಿರುವ ಡಿ ಎಂ ಸೋಮೇಶರಾಧ್ಯಾಯ ಪೊಳ್ಳು ನಂಬಿಕೆಗಳು, ಮೂಢನಂಬಿಕೆಗಳು ಮತ್ತು ನಕಲಿ ಸ್ವಾಮಿಗಳ ಬಗ್ಗೆ ಕಳೆದ 12 ವರ್ಷಗಳಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. 2004ರಲ್ಲಿ ಅವರು ಚನ್ನರಾಯಪಟ್ಟಣದ ಸಮೀಪದ ಗ್ರಾಮವೊಂದರಲ್ಲಿ ಯುವತಿಯೊಬ್ಬಳ ಕತೆ ಕೇಳಿದಲ್ಲಿಂದ ಈ ಕೆಲಸ ಆರಂಭವಾಗಿದೆ.

“ಯುವತಿ ಆಗಾಗ್ಗೆ ಹೊಟ್ಟೆನೋವಿನಿಂದ ನರಳುತ್ತಿದ್ದರು. ಆಕೆಯನ್ನು ವೈದ್ಯರ ಬಳಿ ಕೊಂಡೊಯ್ಯುವ ಬದಲಾಗಿ ಸಮೀಪದ ಸ್ವಾಮಿ ಬಳಿ ಕೊಂಡು ಹೋದರೆ, ಆಕೆಗೆ ದೆವ್ವ ಬಡಿದಿದೆ ಎಂದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಅಲ್ಸರ್ ಜೋರಾಗಿ ಆಕೆ ಸತ್ತೇ ಹೋದಳು” ಎನ್ನುತ್ತಾರೆ ಅವರು.

“ಗ್ರಾಮೀಣ ಜನರ ಅಮಾಯಕತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಮಾನಸಿಕ ಭಯೋತ್ಪಾದನೆಯ ಮೂಲಕ ಅವರನ್ನು ಬೆಲೆ ತೆರುವಂತೆ ಮಾಡಲಾಗುತ್ತಿದೆ” ಎನ್ನುತ್ತಾರೆ ಮಂಡ್ಯದಲ್ಲಿ ಅಧ್ಯಾಪಕರಾಗಿರುವ 40 ವರ್ಷದ ರವಿಶಂಕರ ಹೊನ್ನಾವರ.

1994ರಿಂದಲೇ ವೈಚಾರಿಕತೆಯನ್ನು ಪ್ರಚುರಪಡಿಸುತ್ತಿರುವ ಹುಲಿಕಲ್ ನಟರಾಜ್ ತಂಡದಲ್ಲಿ ಈ ಅಧ್ಯಾಪಕ ಕಮ್ ವಿಚಾರವಾದಿಗಳು ಕೆಲಸ ಮಾಡುತ್ತಿದ್ದಾರೆ. “ನಾನು ಆರನೇ ತರಗತಿಯಲ್ಲಿದ್ದಾಗ ಗ್ರಾಮವೊಂದಕ್ಕೆ ಭೇಟಿ ನೀಡಿದಾಗ ಸ್ವಾಮಿಯೊಬ್ಬರು ನನ್ನ ತಾಯಿಯನ್ನು ಅಲ್ಲಿ ಬಿಡುವಂತೆ ತಂದೆಗೆ ಸೂಚಿಸಿದರು. ದೇವರು ತಾಯಿಯನ್ನು ತೊರೆದಿರುವ ಕಾರಣ ಆಕೆಯನ್ನು ಅಲ್ಲಿಬಿಟ್ಟು ತಂದೆ ಹೊರಟುಹೋದರು. ಆದರೆ ನಾನು ತಾಯಿ ಜೊತೆಗೇ ನಿಂತೆ. ರಾತ್ರಿ ಸ್ವಾಮಿ ತಾಯಿ ಮೇಲೆ ಆಕ್ರಮಣ ಮಾಡಿದ. ನಾನು ಹೇಗೋ ತಪ್ಪಿಸಿಕೊಂಡೆ. ಅಂದೇ ಇಂತಹ ನಕಲಿ ಸ್ವಾಮಿಗಳ ಸತ್ಯ ಬಹಿರಂಗಪಡಿಸುವಂತೆ ತಾಯಿ ನನ್ನ ಬಳಿ ವಾಗ್ದಾನ ತೆಗೆದುಕೊಂಡಿದ್ದರು” ಎನುತ್ತಾರೆ ಹುಲಿಕಲ್ ನಟರಾಜ್.