ರಸ್ತೆ ಬದಿ ನಿಸರ್ಗದತ್ತ ಭತ್ತದ ಗದ್ದೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಶಾಲಾ ಮಕ್ಕಳಿಗೋಸ್ಕರ ಅಲ್ಲೊಂದು ಇಲ್ಲೊಂದು ಕೃಷಿ ಪಾಠದ ಸಂಭ್ರಮ ನೋಡಿದ್ದೇನೋ ನಿಜ. ಆದರೆ ಕಾವು-ಈಶ್ವರಮಂಗಲ ರಸ್ತೆಯಿಂದ 50 ಅಡಿ ದೂರದ ಹೈವೇ ಬದಿಯಲ್ಲಿ ಉತ್ತದೆ, ಬಿತ್ತದೆ, ಯಾರೂ ನೀರು ಕಟ್ಟದೆ, ಗೊಬ್ಬರವು ಇಲ್ಲದೆ ಭತ್ತದ ಗದ್ದೆಯೊಂದು ನಿಸರ್ಗದತ್ತವಾಗಿ ನಿರ್ಮಾಣವಾಗಿದೆ.

ಹೈವೇ ರೋಡಿನಲ್ಲಿ ಎಷ್ಟೋ ಲಾರಿ ಬೈ ಹುಲ್ಲು ಹೋಗಬಹುದು. ಆದರೆ ಎಲ್ಲೂ ಹೀಗೆ ಆಗಿಲ್ಲ. ಇಲ್ಲಿ ಗಾಡಿಯ ಚಕ್ರವೇ ಉಳುಮೆ. ಬೈ ಹುಲ್ಲು ಲಾರಿಯಿಂದ ಬಿದ್ದ ಬೀಜಗಳೆ ಬಿತ್ತನೆಯಾಗಿ ಗದ್ದೆಯಾಗಿ ಗಿಡಗಳು ಹುಲುಸಾಗಿ ಬೆಳೆದು ಭತ್ತದ ಕದಿರುಗಳು ತೆನೆ ತೂಗಲು ಪ್ರಾರಂಭಿಸಿದೆ.

ಇದಕ್ಕೆ ಯಾವುದೇ ಕೀಟದ ಹಾವಳಿ ಇಲ್ಲ, ಬೇಲಿಯೂ ಇಲ್ಲ, ಪ್ರಾಣಿಗಳ ಉಪಟಳವೂ ಇಲ್ಲ. ಕುಮಾರ್ ಪೆರ್ನಾಜೆ ಇದನ್ನು ಕಂಡು ನಮ್ಮ ಓದುಗರಿಗಾಗಿ ಈ ಚಿತ್ರ ನೀಡಿದ್ದಾರೆ.