ಉಳ್ಳಾಲದಲ್ಲಿ ಕೋಮುಸಾಮರಸ್ಯ

ಬ್ರಹ್ಮಕಲಶೋತ್ಸವದ ನಿಮಿತ್ತ ಮೆರವಣಿಗೆಯಲ್ಲಿ ಮುಸ್ಲಿಮರಿಂದ ಶರ್ಬತ್ ವಿತರಣೆ ನಡೆಯಿತು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೋಮುದಳ್ಳುರಿಯಿಂದ ನಲುಗಿಹೋಗಿದ್ದ, ಹಲವು ಸಮಯಗಳಿಂದ ಹಿಂದೂ-ಮುಸ್ಲಿಮರ ಶಾಂತಿ, ಸುವ್ಯವಸ್ಥೆಗೆ ಭಂಗ ತಂದಿದ್ದ ಉಳ್ಳಾಲದಲ್ಲಿ ಇದೀಗ ಕೋಮುಸಾಮರಸ್ಯದ ಗಾಳಿ ಬೀಸತೊಡಗಿದೆ. ಶುಕ್ರವಾರ ನಡೆದ ಒಂದು ಅಪರೂಪದ ಘಟನೆ ಕೋಮುಸಾಮರಸ್ಯ ಈಗಲೂ ಜೀವಂತವಾಗಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ.

ಉಳ್ಳಾಲ ಉಳಿಯದ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ತೊಕ್ಕೊಟ್ಟುವಿನಿಂದ ಉಳ್ಳಾಲ ಉಳಿಯಕ್ಕೆ ಹೊರೆ ದಿಬ್ಬಣ ಹಸಿರುವಾಣಿ ಹೊರೆಕಾಣಿಕೆಯ ಶೋಭಾಯಾತ್ರೆಗೆ ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿ ಮುಸ್ಲಿಮರು ಪ್ರೀತಿಪೂರ್ವಕ ಸ್ವಾಗತಿಸಿ ತಂಪು ಪಾನೀಯ ಹಾಗೂ ಕುಡಿಯುವ ನೀರು ವಿತರಿಸಿದರು. ಉಳ್ಳಾಲ ಉಳಿಯದ ಧರ್ಮ ಅರಸರ ಧರ್ಮ ನಡಾವಳಿ ಮಹೋತ್ಸವ ಜ 6ರಿಂದ 12ರವರೆಗೆ ನಡೆಯಲಿದೆ.