ಅಮ್ಮನ ನೋವಿಗೆ ಗೆಲುವಿನ ಧಾರೆ

ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಎಸ್ ಎಸ್ ಮಹಾದೇವ್ ಪ್ರಸಾದರು ಸೋಲಿಲ್ಲದ ಸರದಾರ ಎನಿಸಿದ್ದರು. ಇವರ ಸಾವಿನ ನಂತರದಲ್ಲಿ ನಡೆದ ಉಪಚುನಾವಣೆಯಲ್ಲಿ ತಮ್ಮ ಪತಿ ಹಾದಿಯನ್ನೇ ಅನುಸರಿಸಿ ಬಹು ಅಂತರದಲ್ಲಿ ಗೆಲುವು ಸಾಧಿಸಿ ಮಹಿಳೆಯೂ ರಾಜಕೀಯವಾಗಿ ಪ್ರಬಲ ಎಂದು ತೋರಿಸಿಕೊಟ್ಟ ಗೀತಾ ಮಹಾದೇವ್ ಪ್ರಸಾದರಿಗೆ ಹ್ಯಾಟ್ಸಫ್
ಹೆಣ್ಣು ಈ ಸಮಾಜದ ಕಣ್ಣು. ಹೀಗಾಗಿ ಮಹಿಳೆಯರಿಗೆ ಟಿಕೆಟ್ ನೀಡಿ ಅವರು ರಾಜಕೀಯದತ್ತ ಮುಖಮಾಡುವಂತೆ ಮಾಡಿ ಒಂದು ವಾರಗಳ ಕಾಲ ಕಾಂಗ್ರೆಸ್ ಮುಖಂಡರು ಚುನಾವಣೆಯ ಪ್ರಚಾರದಲ್ಲಿ ತೊಡಗಿ ಜನರನ್ನು ಸೆಳೆಯುವ ಕೆಲಸ ಮಾಡಿದ್ದರು. ಬಹು ಅಂತರದ ಗೆಲುವು ಪತಿಯನ್ನು ಕಳೆದುಕೊಂಡ ಅಮ್ಮನ ನೋವಿಗೆ ಜನರು ಗೆಲುವಿನ ಧಾರೆ ಎರೆದಂತಾಗಿದೆ. ಈಗ ಅವರಿಗೆ ತಮ್ಮ ಕ್ಷೇತ್ರವನ್ನು ಹಾಗೂ ಜಿಲ್ಲೆಯನ್ನು ಮಾದರಿಯಾಗಿಸುವ ಕಾಲ ಒದಗಿ ಬಂದಿದೆ

  • ಸುರಾಜ್ ಮೆಂಡನ್  ಮಲ್ಪೆ ಉಡುಪಿ