ಜಗತ್ತಿನ ಅಸಮಾನತೆಗೆ ಕನ್ನಡಿ ಹಿಡಿಯುತ್ತದೆ

ಜಗತ್ತಿನ ಒಟ್ಟು ಸಂಪತ್ತಿನ ಅರ್ಧದಷ್ಟು ಕೇವಲ ಎಂಟು ಮಂದಿ ಅಗರ್ಭ ಶ್ರೀಮಂತರ ಕೈಯಲ್ಲಿದೆ ಎಂಬ ಸುದ್ದಿ ಪ್ರಕಟವಾಗಿದೆ. ಇದು ನಿಜಕ್ಕೂ ಜಗತ್ತಿನಲ್ಲಿರುವ ಅಸಮಾನತೆಗೆ ಕನ್ನಡಿ ಹಿಡಿಯುತ್ತದೆ. ಸಿರಿವಂತರು ಇನ್ನಷ್ಟು ಶ್ರೀಮಂತರಾಗುವ, ಬಡವರು ಮತ್ತಷ್ಟು ಬಡವರಾಗುವ ಪರಿಸ್ಥಿತಿಗೆ ಇದು ಉದಾಹರಣೆಯಾಗಿದೆ. ಜಗತ್ತಿನ ಕೆಲವು ದೇಶಗಳಂತೂ ಅತ್ಯಂತ ಬಡ ದೇಶಗಳಾಗಿದ್ದು ಅಲ್ಲಿನ ಜನರು ತುತ್ತು ಕೂಳಿಗೂ ಪರದಾಡುವಂತಹ ಸ್ಥಿತಿಯಿದೆ. ಆದರೆ ಬೆರಳೆಣಿಕೆ ಮಂದಿ ಸಂಪತ್ತನ್ನು ತಮ್ಮಲ್ಲಿಯೇ ಕ್ರೋಢೀಕರಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿರುವುದು ಎಂಥ ವಿಪರ್ಯಾಸ

  • ಕರುಣಾಕರ ರೈ  ಪುತ್ತೂರು