ವೈದ್ಯರು ದೇವರಿಗೆ ಸಮ ಎಂಬುದು ಕನಸು ಮಾತ್ರವೇ

ರೋಗಿಗಳ ಕಡೆಗೆ ಹೆಚ್ಚಿನ ಗಮನಹರಿಸಿ ತಕ್ಕ ಚಿಕಿತ್ಸೆಯನ್ನು ನೀಡಿ ಗುಣಪಡಿಸುವುದು ವೈದ್ಯರ ಕರ್ತವ್ಯ. ವೈದ್ಯರುಗಳು ರಾತ್ರಿ ನಿದ್ರೆ ಇಲ್ಲದೆ ಕೂಡಾ ತುರ್ತು ಸಂದರ್ಭಗಳಲ್ಲಿ ರೋಗಿಗಳ ಪ್ರಾಣ ಉಳಿಸಲು ಶತ ಪ್ರಯತ್ನ ಪಡುತ್ತಾರೆ. ಆಕಸ್ಮಾತ್ ಕೆಲವು ಘಟನೆಗಳಲ್ಲಿ ರೋಗಿಯು ಮೃತಪಟ್ಟಲ್ಲಿ ವೈದ್ಯರ ಮೇಲೆ ಹಲ್ಲೆ, ಆಸ್ಪತ್ರೆಗಳಿಗೆ ಕಲ್ಲು ತೂರಾಟ ಉಂಟು ಮಾಡಿ ನಷ್ಟ ಉಂಟು ಮಾಡುವುದು ಸರ್ವಥಾ ಸರಿಯಲ್ಲ. ವೈದ್ಯರು ರೋಗಿಯ ಜೀವ ಉಳಿಸಲು ಪ್ರಯತ್ನ ಪಡುತ್ತಾರೆಯೇ ವಿನಃ ಅವರ ಜೀವ ಹೋಗಲಿ ಎಂಬುದು ಯಾವ ವೈದ್ಯರು ಇಚ್ಛಿಸುವುದಿಲ್ಲ. ಜೀವ ಹೋಗುವ ಅಥವಾ ಪ್ರಾಣಪಕ್ಷಿ ಹಾರಿ ಹೋಗುವ ಸಮಯ ಯಾವ ವೈದ್ಯರಿಗೂ ಜೀವ ಉಳಿಸಲು ಸಾಧ್ಯವಾಗುತ್ತಿಲ್ಲ. ಯಾವ ಹೊತ್ತಿಗೆ ಹೇಗೆ ಯಾವ ರೀತಿಯಲ್ಲಿ ತಮಗೆ ಮರಣ ಎಂಬುದನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಆ ಸಮಯ ದೇವರಿಗೆ ಗೊತ್ತು.
ಇತ್ತೀಚೆಗೆ ನಡೆದ ಕೆಲವು ಘಟನೆಗಳು ಬಹಳ ಬೇಸರ ತರಿಸುವಂಥದ್ದು. ರೋಗಿಯ ಸಂಬಂಧಪಟ್ಟವರು ಇಂತಹ ಘಳಿಗೆಗಳಿಗೆ ಅವಕಾಶ ಕೊಡಬಾರದು. ವೈದ್ಯರು ದೇವರಿಗೆ ಸಮ ಎಂಬುದು ಬರೀ ಕನಸ್ಸು ಮಾತ್ರವಲ್ಲ. ನಿಜಕ್ಕೂ ವೈದ್ಯರು ದೇವರಿಗೆ ಸಮ

  • ಅರ್ಥರ್ ಮೆಂಡೋನ್ಸಾ  ಪುತ್ತೂರು