ಮನೀಶ್ ಮಲ್ಹೋತ್ರಾ ಎನ್ನುವ ಮಾಂತ್ರಿಕಗೆ 50

ಮನೀಶ್ ಮಲ್ಹೋತ್ರಾ ಒಬ್ಬ ಅದ್ಭುತ ಡ್ರೆಸ್ ಡಿಸೈನರ್. ಬಾಲಿವುಡ್ ಬೆಡಗಿಯರ ಸೌಂದರ್ಯಕ್ಕೆ ವಿಸಿಷ್ಟವಾದ ಮೆರಗು ನೀಡುವ ಮಾಂತ್ರಿಕ ಟಚ್ ಇವರಲ್ಲಿದೆ. ಮನೀಷ್ ಮೊನ್ನೆಯಷ್ಟೇ ತನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಮನೀಶ್ ಹಲವು ಸಿನಿಮಾಗಳ ನಟನಟಿಯರಿಗೆ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಲೆಕ್ಕವಿಲ್ಲದಷ್ಟು ಚಿತ್ರಗಳಲ್ಲಿ ಇವರದೇ ಕಾಸ್ಟ್ಯೂಮ್ಸ್ ಬಳಸಿದ್ದಾರೆ. ಶ್ರೀದೇವಿ, ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ, ಪ್ರೀತಿ ಝಿಂಟಾ, ದೀಪಿಕಾ, ಕರೀನಾ, ಅನುಷ್ಕಾ, ಕತ್ರೀನಾ, ಆಲಿಯಾ, ಪರಿಣೀತಿ, ಜಾಕ್ಲಿನ್, ಸೋನಾಕ್ಷಿ ಹೀಗೆ ಹೆಚ್ಚಿನ ಬಾಲಿವುಡ್ ಹೀರೋಯಿನ್ಸ್‍ಗಳ ಫೇವರಿಟ್ ಡಿಸೈನರ್ ಆಗಿದ್ದಾರೆ ಮನೀಶ್. ಹಲವಾರು ಫ್ಯಾಷನ್ ಶೋಗಳಲ್ಲಿ ವಿಭಿನ್ನ ಡಿಸೈನಿನ ಉಡುಗೆಗಳನ್ನು ಮಾಡೆಲ್ಲುಗಳಿಗೆ ತೊಡಿಸಿ ಪ್ಯಾಷನ್ ಜಗತ್ತಿಗೆ ಪರಿಚಯಿಸಿದವರು ಮನೀಶ್. ಇವರು ಡಿಸೈನ್ ಮಾಡಿದ ಡ್ರೆಸ್ ತೊಟ್ಟು ರ್ಯಾಂಪ್ ವಾಕ್ ಮಾಡಲು ದೊಡ್ಡ ದೊಡ್ಡ ನಟಿಯರೇ ಕಾತರದಿಂದ ಕಾಯುತ್ತಿರುತ್ತಾರೆ. ಶಾರೂಕ್ ಖಾನ್ ಸಹ ಮನೀಶ್ ತಯಾರಿಸಿದ ಉಡುಪನ್ನು ಕೆಲವು ಚಿತ್ರಗಳಲ್ಲಿ ಧರಿಸಿದ್ದರು. ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ಡಿನ ಕೆಲವರಿಗೂ ಇವರು ಡಿಸೈನ್ ಮಾಡಿದ ಡ್ರೆಸ್ ಅಂದರೆ ಅಚ್ಚುಮೆಚ್ಚು.
ಮನೀಶರÀ 50ನೇ ಹುಟ್ಟುಹಬ್ಬ ಮೊನ್ನೆ ಬಹಳ ಧೂಂಧಾಂ ಆಗಿ ನಡೆದಿದ್ದು ಹೆಚ್ಚಿನ ಬಾಲಿವುಡ್ ಸ್ಟಾರ್ಸ್ ಬಹಳ ಸ್ಟೈಲಿಶ್ ಆಗಿ ಅಲ್ಲಿ ಕಾಣಿಸಿಕೊಂಡಿದ್ದರು.
ಅಂದ ಹಾಗೆ ಮನೀಶ್ ತನ್ನ ಕಾಸ್ಟೂಮ್ ಡಿಸೈನಿಂಗಿಗಾಗಿ ಫಿಲ್ಮ್ ಫೇರ್ ಅವಾರ್ಡ್ ಸಮೇತ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.