ಯಾವುದೇ ವ್ಯಕ್ತಿಯ ಕೊಲೆ ಮಾಡುವುದರಿಂದ ಅವರ ಉಸಿರು ನಿಲ್ಲಿಸಬಹುದೇ ಹೊರತು ವಿಚಾರಗಳನ್ನಲ್ಲ

ವಿವಿಧತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟ್ರ ಭಾರತ ಇಲ್ಲಿ ಲೆಕ್ಕವೇ ಇಲ್ಲದಷ್ಟು ಜಾತಿ ಜನಾಂಗಗಳಿವೆ ಧರ್ಮಗಳಿವೆ ನಮ್ಮ ವಿಚಾರಧಾರೆಗಳನ್ನು ಒಪ್ಪದವರನ್ನು ವೈಚಾರಿಕವಾಗಿ ವಿರೋಧಿಸಬೇಕು ವೈಚಾರಿಕ ಸಂಘರ್ಷ ಮತ್ತು ವಾದಕ್ಕಿಳಿಯಬೇಕು ಹೊರತು ಶಾರೀರಿಕ ಸಂಘರ್ಷಕ್ಕಲ್ಲ ಇಲ್ಲಿ ಯಾರದೋ ರಾಜಕೀಯ ಉದ್ದೇಶಗಳಿಗಾಗಿ ಅನೇಕ ಅಮಾಯಕರು ಬಲಿಪಶುಗಳಾಗುತ್ತಿದ್ದಾರೆ ಅದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕಿದೆ ಇದು ಎಡ ಮತ್ತು ಬಲಪಂಥೀಯರಿಬ್ಬರಿಗೂ ಅನ್ವಯವಾ ಗುತ್ತದೆ ಯಾವುದೇ ವ್ಯಕ್ತಿಯ ಕೊಲೆ ಮಾಡುವುದರಿಂದ ಅವರ ಉಸಿರನ್ನು ನಿಲ್ಲಿಸಬಹುದೇ ಹೊರತು ಅವರ ವಿಚಾರಗಳನ್ನಲ್ಲ ಸಾಮರಸ್ಯ ಮೂಡಿಸು ವುದು ಈಗಿನ ಯುವ ಜನತೆಯ ಮುಂದಿರುವ ಒಂದು ದೊಡ್ಡ ಸವಾಲು

  • ಸುಜೀತ್ ಕುಮಾರ್  ಬೈಂದೂರು