ಫೇಸ್ಬುಕ್ಕಲ್ಲಿ ವಿವಾದಕ್ಕೀಡಾದ ಭಾರತ ವಿರುದ್ಧದ ಸ್ಟೇಟಸ್

ಮುಲ್ಕಿ : ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧ ಪಾಕಿಸ್ಥಾನ ಜಯ ಗಳಿಸುತ್ತಿದ್ದಂತೆ ಕಿನ್ನಿಗೋಳಿ ಸಮೀಪದ ಗುತ್ತಕಾಡು ಯುವಕನೊಬ್ಬ ಫೇಸ್ಬುಕ್ಕಲ್ಲಿ ಮೈ ಫೇವರೇಟ್ ಟೀಂ ಪಾಕಿಸ್ತಾನ್ ಎಂದು ಫೋಟೋ ಅಪ್ಲೋಡ್ ಮಾಡಿ ಸ್ಥಳೀಯ ಯುವಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಈತ ತಿಂಗಳ ಹಿಂದೆ ಗೋಹತ್ಯೆ ಬಗ್ಗೆ ಶಾಸನ ಬಂದಾಗ ಫೇಸ್ಬುಕ್ಕಿನಲ್ಲಿ ಸ್ಟೇಟಸ್ ಹಾಕಿ ಪಾಕಿಸ್ತಾನದವರು ಯುದ್ಧ ಮಾಡುವಾಗ ಗೋವುಗಳನ್ನು ಎದರುಗಿಟ್ಟು ಯುದ್ಧ ಮಾಡಿದರೆ ಭಾರತೀಯ ಸೈನ್ಯದವರು ಏನು ಮಾಡುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದ್ದಾನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ನೆಲದಲ್ಲಿದ್ದುಕೊಂಡು ಫೇಸ್ಬುಕ್ಕಿನಲ್ಲಿ ವಿರೋಧಿ ಹೇಳಿಕೆ ನೀಡುತ್ತಿರುವ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.