ಮುಲ್ಕಿ ಬಸ್ ನಿಲ್ದಾಣದ ಬಳಿ ಅಪಾಯಕಾರಿ ಹೊಂಡ

ಮುಲ್ಕಿ : ಇಲ್ಲಿನ ಬಸ್ ನಿಲ್ದಾಣದ ಬಳಿಯ ಭಾರತ್ ಬ್ಯಾಂಕಿನ ಎದುರು ಅಪಾಯಕಾರಿ, ಕೊಳಚೆ ನೀರು ಹೋಗುವ ಹೊಂಡ ಬಾಯ್ದೆರೆದು ನಿಂತಿದೆ. ಹೊಂಡಕ್ಕೆ ಕಸಕಡ್ಡಿಗಳು ಹೋಗದಂತೆ ಹಾಕಿರುವ ಕಬ್ಬಿಣದ ಸರಳುಗಳು ತುಂಡಾಗಿ ಅಪಾಯಕಾರಿಯಾಗಿ ಬಾಯ್ದೆರೆದಿದೆ. ರಾತ್ರಿ ನಿಲ್ದಾಣದ ಹಿಂಬದಿಗೆ ಬಸ್ಸಿನಿಂದ ಇಳಿದು ಪ್ರಯಾಣಿಕರು ಇದೇ ದಾರಿಯಲ್ಲಿ ಸಾಗುತ್ತಿದ್ದು, ಕೂಡಲೇ ಮುಲ್ಕಿ ನಗರಪಂಚಾಯತಿ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಬಸ್ ನಿಲ್ದಾಣದಲ್ಲಿರುವ ಲಯನ್ಸ್ ಸಂಸ್ಥೆಯಿಂದ ಕೊಡಮಾಡಿದ ಸಾರ್ವಜನಿಕ ಕುಡಿಯುವ ನೀರಿನ ಯೋಜನೆಯು ತುಕ್ಕು ಹಿಡಿಯುತ್ತಿದ್ದು, ಇದನ್ನು ಸರಿಪಡಿಸಲು ಕೂಡ ಮುಲ್ಕಿ ನಗರ ಪಂಚಾಯತಿ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.