ಬೆಂಕಿಪೆಟ್ಟಿಗೆ ಕಡ್ಡಿಯಿಂದ ಕ್ರಿಸ್ಮಸ್ ಗೋದಲಿ

ಬೆಂಕಿ ಕಡ್ಡಿಗಳ ಗೋದಲಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬಂದ್ಯೋಡಿನ ಇಚ್ಲಂಗೋಡು ನಿವಾಸಿ ಹಿತೇಶ್ (ಪುಟ್ಟ) ಇಚ್ಲಂಗೋಡು ಅವರು ವಿಶಿಷ್ಟ ಕ್ರಿಸ್ಮಸ್ ಗೋದಲಿಯನ್ನು ರಚಿಸಿದ್ದಾರೆ.

mjr4-xmas-godali1
ಹಿತೇಶ್ ಇಚ್ಲಂಗೋಡು

ಈ ಗೋದಲಿಯನ್ನು ಬೆಂಕಿ ಪೆಟ್ಟಿಗೆ ಕಡ್ಡಿಗಳಿಂದ ನಿರ್ಮಿಸಲಾಗಿದೆ. ಈ ಗೋದಲಿಯು ಕೇವಲ ಅಂಗೈಯಷ್ಟು ಅಗಲವಿದೆ. ಈತ ಈ ಮೊದಲು ಪೆನ್ಸಿಲ್ ಮೊನೆಯಲ್ಲಿ ಗಮನೀಯ ಆಕೃತಿಗಳನ್ನು ರಚಿಸಿ ಪ್ರತಿಭೆ ಮೆರೆದಿದ್ದರು.